ಆದ್ರೆ ಮನೆಯಲ್ಲಿರುವ ಧೂಳು ಕೂಡ ನಿಮ್ಮ ತೂಕ ಹೆಚ್ಚಾಗಲು ಕಾರಣ ಎಂಬ ವಿಷ್ಯ ನಿಮಗೆ ಗೊತ್ತಾ?
ಇತ್ತೀಚೆಗೆ ನಡೆದ ಸಂಶೋಧನೆಯೊಂದು ಈ ವಿಷಯವನ್ನು ಸ್ಪಷ್ಟಪಡಿಸಿದೆ. ಮನೆಯಲ್ಲಿರುವ ಧೂಳು ಹಾಗೂ ಕೊಳಕು ದೇಹದ ಕೊಬ್ಬನ್ನು ಹೆಚ್ಚು ಮಾಡುತ್ತದೆಯಂತೆ. ಅಮೆರಿಕನ್ ಕೆಮಿಕಲ್ ಸೊಸೈಟಿ ಜರ್ನಲ್ ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಪ್ರಕಾರ, ಧೂಳಿನ ಕಣಗಳಲ್ಲಿರುವ ರಾಸಾಯನಿಕ ವಸ್ತು ಬೊಜ್ಜಿಗೆ ಕಾರಣವಾಗುತ್ತದೆ.
ಪ್ರಾಣಿಗಳ ಮೇಲೆ ಧೂಳಿನ ಪ್ರಭಾವ ತಡವಾಗಿ ಪರಿಣಾಮ ಬೀರುತ್ತದೆ. ಆದ್ರೆ ಮನುಷ್ಯನ ಮೇಲೆ ಅತಿ ಬೇಗವಾಗಿ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳಿದೆ. ಮಕ್ಕಳ ಮೇಲೆಯೂ ಇದು ಪರಿಣಾಮ ಬೀರಲಿದ್ದು, ಮಕ್ಕಳ ಬೊಜ್ಜಿಗೂ ಧೂಳು ಕಾರಣವಾಗುತ್ತದೆಯಂತೆ.