ನಿಮ್ಮ ಮಕ್ಕಳು ಮೊಬೈಲ್ ದಾಸರಾಗಿದ್ದಾರಾ? ಈ ಚಟ ಬಿಡಿಸಲು ಈ ಟ್ರಿಕ್ ಫಾಲೋ ಮಾಡಿ!

Date:

ನಿಮ್ಮ ಮಕ್ಕಳು ಮೊಬೈಲ್ ದಾಸರಾಗಿದ್ದಾರಾ? ಈ ಚಟ ಬಿಡಿಸಲು ಈ ಟ್ರಿಕ್ ಫಾಲೋ ಮಾಡಿ!

ಇಂದಿನ ಕಾಲದಲ್ಲಿ ಫೋನ್‌ ಇಲ್ಲದೆ ಊಟ ಮಾಡುವುದಿಲ್ಲ ಎಂದು ಹಟ ಮಾಡಬಹುದು. ಅಲ್ಲದೆ, ಪೋಷಕರೇ ಮಗು ಸ್ವಲ್ಪ ಹಟ ಮಾಡಿದರೆ ಅವರನ್ನು ತ್ವರಿತವಾಗಿ ಸುಧಾರಿಸಲು ಮೊಬೈಲ್‌ಗಳನ್ನು ನೀಡುವುದುಂಟು.

ಇದರಿಂದ ಮಕ್ಕಳು- ಪೋಷಕರಿಗೆ ಹಾಗು ಪೋಷಕರಿಗೆ- ಮಕ್ಕಳು ದೂರವಾಗುತ್ತಿದ್ದಾರೆ. ವಾಸ್ತವವಾಗಿ, ಆನ್‌ಲೈನ್‌ ಪ್ರಪಂಚವು ಅತ್ಯಂತ ವ್ಯಸನಕಾರಿಯಾಗಿದೆ. ಇದು ಅತಿಯಾದರೆ ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾದರೆ ಈ ಚಟವನ್ನು ಹೇಗೆ ತಡೆಯಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

ಅತಿಯಾದ ಮೊಬೈಲ್ ಬಳಕೆ ಮಕ್ಕಳ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತಿದೆ. ಮಾನಸಿಕ ಆರೋಗ್ಯದ ಜೊತೆಗೆ ಕಣ್ಣಿನ ಆರೋಗ್ಯಕ್ಕೆ ಸಹ ಇದು ಅಪಾಯ. ಹಾಗಾಗಿ ಪೋಷಕರು ಮುಂಜಾಗ್ರತೆ ತೆಗೆದುಕೊಳ್ಳುವುದು ಸಹ ಮುಖ್ಯ.

ಮಕ್ಕಳು ಮೊಬೈಲ್​ ಅನ್ನು ಯಾವ ಕಾರಣಕ್ಕೆ ಬಳಸುತ್ತಾರೆ ಎಂಬುದು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದರೆ ಮಕ್ಕಳ ಮೇಲೆ ಸ್ವಲ್ಪ ನಿಗಾ ಇಡುವುದು ಸಹಾಯ ಮಾಡುತ್ತದೆ. ಮೊಬೈಲ್​ನಲ್ಲಿಏನು ಮಾಡುತ್ತಾರೆ ಎಂಬುದನ್ನ ಗಮನಿಸಿ, ಸಾಧ್ಯವಾದರೆ ಕೆಲ ಆ್ಯಪ್​ ಮೇಲೆ ಲಾಕ್ ಇಡಿ.

ಮಕ್ಕಳಿಗೆ ಈ ಮೊಬೈಲ್ ಅತಿಯಾಗಿ ಬಳಸುವುದರಿಂದ ಏನೆಲ್ಲಾ ಸಮಸ್ಯೆ ಬರುತ್ತದೆ ಎಂಬುದನ್ನ ಹೇಳಿ. ಅವರಿಗೆ ಅರ್ಥವಾಗುವ ರೀತಿ ಹೇಳುವುದು ಸಹಾಯ ಮಾಡುತ್ತದೆ. ಕೆಲವೊಮ್ಮೆ ಅನಿವಾರ್ಯವಾಗಿ ಹೆದರಿಸುವುದು ತಪ್ಪಲ್ಲ.

ಟೈಮ್ ಟೇಬಲ್ ಮಾಡಿಕೊಡಿ: ನೀವು ಮಕ್ಕಳಿಗೆ ಒಂದು ಟೈಮ್​ ಟೇಬಲ್ ಮಾಡಿಕೊಡುವುದು ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತದೆ. ಮೊಬೈಲ್ ಬಳಕೆಗೆ ದಿನಕ್ಕೆ ಅರ್ಧಗಂಟೆ ಮಾತ್ರ ಇಡಿ. ಹಾಗೆಯೇ ಓದಲು, ಆಟ ಆಡಲು, ಹೊರಗಿನ ಮಕ್ಕಳ ಜೊತೆ ಸೇರಲು ಸಹ ಅವರಿಗೆ ಸಮಯ ಮೀಸಲಿಡಿ. ಇದು ಮೊಬೈಲ್ ಬಳಕೆ ಕಡಿಮೆ ಮಾಡುತ್ತದೆ.

ಅವರಲ್ಲಿ ಹವ್ಯಾಸ ಬೆಳೆಸಿ: ಪ್ರತಿಯೊಬ್ಬ ಮಕ್ಕಳಲ್ಲಿ ಒಂದು ಹವ್ಯಾಸ ಇರುತ್ತದೆ. ಕೆಲವರಿಗೆ ಹಾಡುವುದು, ಚಿತ್ರ ಬಿಡಿಸುವುದು ಹೀಗೆ ಕೆಲವೊಂದು ಇಷ್ಟ ಇರುತ್ತದೆ. ಹಾಗೆಯೇ, ಕ್ರೀಡೆಯಲ್ಲಿ ಸಹ ಆಸಕ್ತಿ ಇರುತ್ತದೆ. ಯಾವುದು ಇಷ್ಟ ಎಂದು ಗುರುತಿಸಿ ಅದರಲ್ಲಿ ಅವರನ್ನು ಹೆಚ್ಚು ಕಾಲ ಸಮಯ ಕಳೆಯಲು ಪ್ರೋತ್ಸಾಹಿಸಿ.

ದೈಹಿಕ ಚಟುವಟಿಕೆ ಹೆಚ್ಚಿಸಿ: ಮಕ್ಕಳು ಮೊಬೈಲ್ ಹಿಡಿದು ಮನೆಯಲ್ಲಿ ಕುಳಿತರೆ ದೈಹಿಕ ಚಟುವಟಿಗೆ ಕಡಿಮೆ ಆಗಿ ರೋಗಗಳು ಸಹ ಬರುತ್ತದೆ. ಅಲ್ಲದೇ ಇತರರ ಜೊತೆ ಬೆರೆಯಲು ಸಹ ಬರುವುದಿಲ್ಲ. ಇದು ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಅದಕ್ಕಾಗಿ ಅವರಿಗೆ ಹೊರಗೆ ಹೋಗಿ ಆಟ ಆಡಲು ಹೇಳಿ, ವ್ಯಾಯಾಮ ಮಾಡಿಸಿ.

ನೀವು ಮಾದರಿ ಆಗಬೇಕು: ಮುಖ್ಯವಾಗಿ ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ನಿಮ್ಮ ಫೋನ್ ಬಳಕೆಯ ಮೇಲೆ ಸಹ ನಿಗಾ ಇಡಿ. ನೀವು ಮಕ್ಕಳ ಮುಂದೆ ಅತಿಯಾಗಿ ಫೋನ್ ಬಳಸಿದಾಗ, ಅವರೂ ಸಹ ಅದನ್ನೇ ಮಾಡುತ್ತಾರೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...