ಇಂದು ದಿವಂಗತ ನಟ,ಮಾಜಿ ಸಚಿವ ಅಂಬರೀಶ್ ಅವರ 67 ನೇ ಹುಟ್ಟುಹಬ್ಬದ ಪ್ರಯುಕ್ತ ಬೆಳಗ್ಗೆಯಿಂದಲೇ ಅಂಬಿ ಅಭಿಮಾನಿಗಳು ಇಂದು ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿ ಬಳಿ ಆಗಮಿಸಿ ಪುಷ್ಪಾಲಂಕಾರ ಹಾಗೂ ರಕ್ತದಾನ, ನೇತ್ರದಾನ ಶಿಬಿರ ಹಮ್ಮಿಕೊಂಡಿದ್ದಾರೆ.
ಕಾವೇರಿ ಸಮಸ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಕಾವೇರಿ ಮಂಡ್ಯದ ಜೀವನಾಡಿ, ಈ ವಿಚಾರವಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಐದು ನಿಮಿಷದ ಪ್ರಚಾರಕ್ಕಾಗಿ ಇದನ್ನು ಬಳಸಿಕೊಳ್ಳುವುದು ಹಾಗೂ ಒಬ್ಬರು ಇನ್ನೊಬ್ಬರ ಕಾಲೆಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ.
ಎಲ್ಲರೂ ಒಟ್ಟಾದ್ರೆ ಎಂಥಾ ಕೆಲಸವನ್ನಾದ್ರೂ ಮಾಡಬಹುದು. ಅಲ್ಲದೇ ಕಾವೇರಿ ವಿಚಾರವಾಗಿ ನಾನು ಈಗಾಗಲೇ ದೊಡ್ಡ ದೊಡ್ಡ ಎಕ್ಸ್ ಫರ್ಟ್ಸ್ ಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದು ಹೇಳಿದರು.