ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಳ – ಅಶ್ವಿನಿ ವೈಷ್ಣವ್

Date:

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಳ – ಅಶ್ವಿನಿ ವೈಷ್ಣವ್

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ ನೀಡಲಾಗಿದೆ. ಇದು 2009–14ರ ಅವಧಿಗೆ ಹೋಲಿಸಿದರೆ ಸುಮಾರು 9 ಪಟ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸೋಮವಾರ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2009–14ರ ಅವಧಿಯಲ್ಲಿ ನೈಋತ್ಯ ರೈಲ್ವೆಗೆ ಕೇವಲ ₹835 ಕೋಟಿ ಅನುದಾನ ನೀಡಲಾಗಿತ್ತು. 2025–26ರಲ್ಲಿ ₹7,564 ಕೋಟಿ ಅನುದಾನ ನೀಡಲಾಗಿದ್ದು, ಈ ಬಾರಿ ಕಳೆದ ಸಾಲಿನಿಗಿಂತ ಶೇ. 2.37ರಷ್ಟು ಹೆಚ್ಚುವರಿ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು–ಚೆನ್ನೈ ಹಾಗೂ ಬೆಂಗಳೂರು–ಹೈದರಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಬೆಂಗಳೂರಿನ ಜನರಿಗೆ ದೊಡ್ಡ ಮಟ್ಟದ ಬದಲಾವಣೆ ತರುವ ಯೋಜನೆಗಳಾಗಿವೆ ಎಂದು ಸಚಿವರು ಹೇಳಿದರು. ಈ ಯೋಜನೆಗಳು ಪ್ರಯಾಣ ಸಮಯ ಕಡಿಮೆ ಮಾಡುವ ಜೊತೆಗೆ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.

ಇದೇ ವೇಳೆ ನೈಋತ್ಯ ರೈಲ್ವೆಯ ಹೆಚ್ಚುವರಿ ಮಹಾಪ್ರಬಂಧಕ (ಎಜಿಎಂ) ಪಿ. ಅನಂತ್ ಅವರು 2026–27ರ ರೈಲ್ವೆ ಬಜೆಟ್‌ನ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು.

Share post:

Subscribe

spot_imgspot_img

Popular

More like this
Related

LPG ಬಿಕ್ಕಟ್ಟು ತೀವ್ರ: ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಪರದಾಟ

LPG ಬಿಕ್ಕಟ್ಟು ತೀವ್ರ: ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಪರದಾಟ ಹುಬ್ಬಳ್ಳಿ: ಮಧ್ಯಪ್ರಾಚ್ಯದಲ್ಲಿ...

ಭೀಕರ ಅಪಘಾತ: KSRTC ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು!

ಭೀಕರ ಅಪಘಾತ: KSRTC ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು! ದೊಡ್ಡಬಳ್ಳಾಪುರ:...

ಬಾಯಿಯ ದುರ್ವಾಸನೆ ಕಾಡುತ್ತಿದೆಯೇ? ಈ ಸುಲಭ ಸಲಹೆಗಳು ನಿಮಗಾಗಿ!

ಬಾಯಿಯ ದುರ್ವಾಸನೆ ಕಾಡುತ್ತಿದೆಯೇ? ಈ ಸುಲಭ ಸಲಹೆಗಳು ನಿಮಗಾಗಿ! ಪ್ರತಿಯೊಬ್ಬರೂ ಬಾಯಿ ಶುಚಿತ್ವದ...

ಸೈಬರ್ ಅಪರಾಧ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ

ಸೈಬರ್ ಅಪರಾಧ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ಬೆಂಗಳೂರು: ಸೈಬರ್ ಅಪರಾಧಗಳನ್ನು...