ಅಮೆರಿಕದಲ್ಲಿರುವ ಕನ್ನಡಿಗರು ಮಾಡಿರುವ ಸಾಧನೆ ಇದು ..!

Date:

 

ಕನ್ನಡ ಚಿತ್ರರಂಗಕ್ಕೆ ಹೊಸಬರ ಒಂದು ಹೊಸ ಪ್ರಯತ್ನ  ಅನಿವಾಸಿ ಕನ್ನಡಿಗರ ನಿರ್ಮಾಣದ ರತ್ನಮಂಜರಿ ಚಿತ್ರ ಇದೇ ಮೇ 17 ಕ್ಕೆ ವಿಶ್ವಾದ್ಯಂತ ತೆರೆಕಾಣಲಿದೆ

ಚಿತ್ರದ ಮೋಷನ್ ಪೋಸ್ಟರ್ ನಿಂದ ಪ್ರಾರಂಭಗೊಂಡು ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್ ,ಹಾಡುಗಳೂ ಸಹ ಚಿತ್ರದ ಕುರಿತಾಗಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.
ಹಾಗೂ ಚಿತ್ರದ ಕಥೆ ಅಮೆರಿಕದಲ್ಲಿ ನಡೆದಂತಹ ಕೊಲೆಯ ಹಿನ್ನಲೆಯಲ್ಲಿ ಸಾಗಿದ್ದು, ಯುವ ನಿರ್ದೇಶಕ ಪ್ರಸಿದ್ಧ್ ಹಾರರ್ ಟಚ್ ನೀಡಿದ್ದಾರೆ.

ಯುವ ನಿರ್ದೇಶಕಕನಾಗಿದ್ದರೂ ತಮ್ಮ ಗುರುತನ್ನು ತಮ್ಮ ನಿರ್ದೇಶನದ ಮೂಲಕ ತೋರಿಸಿದ್ದಾರೆ ಪ್ರಸಿದ್ಧ್
ಚಿತ್ರದಲ್ಲಿ ನಾಯಕನಾಗಿ ರಾಜ್ ಚರಣ್ ಹಾಗೂ ನಾಯಕಿಯಾಗಿ ಅಖಿಲಾ ಪ್ರಕಾಶ್ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಹೊಸ ಮುಖದ ಅವಶ್ಯಕತೆಯಿರುವುದರಿಂದ ಈ ಯುವ ನಟ – ನಟಿಯರನ್ನು ಆಯ್ಕೆ ಮಾಡಲಾಗಿದೆ.
ಚಿತ್ರದ 40% ಚಿತ್ರೀಕರಣ ಅಮೆರಿಕದಲ್ಲಿ ನಡೆದಿದ್ದು, ಉಳಿದ ಚಿತ್ರೀಕರಣ ಕೊಡಗು ಹಾಗೂ ಮಲೇಷ್ಯಾದಲ್ಲಿ ನಡೆದಿದೆ.

ಕೊಡವ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಯುವ ಚಿತ್ರತಂಡ ಸಮರ್ಪಕವಾಗಿ ನಿರ್ವಹಿಸಿರುವುದು ಟೀಸರ್ ಹಾಗೂ ಹಾಡುಗಳ ಮೂಲಕ ಸಾಬೀತಾಗಿದೆ ಹಾಗೂ ಹೆಮ್ಮೆಯ ವಿಚಾರ.
ಇನ್ನು ಚಿತ್ರದ ಸಂಗೀತ ನಿರ್ದೇಶನ ನಾದಬ್ರಹ್ಮ ಹಂಸಲೇಕರವರ ಶಿಷ್ಯ ಹರ್ಷವರ್ಧನ್ ರವರು ಅಮೋಘವಾಗಿ ನಿರ್ವಹಿಸಿರುವುದಕ್ಕೆ ಹಾಡುಗಳಿಗೆ ಯೂಟ್ಯೂಬ್ ನಲ್ಲಿ ಸಿಕ್ಕಿರುವ ವೀಕ್ಷಣೆಗಳೇ ಜೀವಂತ ಉದಾಹರಣೆ.

ಶರಾವತಿ ಫಿಲ್ಮ್ಸ್ ಹಾಗೂ ಎಸ್ ಎನ್ ಎಸ್ ಸಿನಿಮಾ ಯು.ಎಸ್.ಎ..ಬ್ಯಾನರ್ ನಡಿಯಲ್ಲಿ ,ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಾದ ಎಸ್ ಸಂದೀಪ್ ಕುಮಾರ್ ಹಾಗೂ ನಟರಾಜ್ ಹಳೇಬೀಡು ಯು.ಎಸ್.ಎ ಜಂಟಿ ನಿರ್ಮಾಣದಲ್ಲಿ ಮೂಡಿರುವ ” ರತ್ನಮಂಜರಿ” ಚಿತ್ರ ಇದೇ ಮೇ 17ಕ್ಕೆ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ

ಅನಿವಾಸಿ ಕನ್ನಡಿಗರ ಕನ್ನಡ ಹಾಗೂ ಸಿನಿಮಾ ಪ್ರೀತಿ, ಯುವ ತಂಡದ ಪ್ರಾಮಾಣಿಕ ಪ್ರಯತ್ನ ಇದೇ ಮೇ 17ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.ಒಂದು ವಿಭಿನ್ನ ಚಿತ್ರ ಬಿಡುಗಡೆಯಾಗಲಿದ್ದು, ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲನ್ನು ನೆರುವ ತವಕದಲ್ಲಿದೆ.

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...