ಟೆಲಿಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ಸಿಬಿಐನಿಂದ ಯಾವುದೇ ನೋಟಿಸ್ ಬಂದಿಲ್ಲ. ಒಂದು ವೇಳೆ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟರೆ ಹಾಜರಾಗುವುದರಲ್ಲಿ ತಪ್ಪೇನು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಹೇಳಿದ್ದಾರೆ.
ನೋಟಿಸ್‍ಗೆ ಯಾವ ಉತ್ತರ ಕೊಡಬೇಕೊ ಅದನ್ನು ಕೊಟ್ಟೆ ಕೊಡುತ್ತೇನೆ. ಆದರೆ ನೋಟಿಸ್ ಬಾರದೆ ಇದ್ದಾಗ ಆ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಊಹಾಪೋಹ ಪ್ರಶ್ನೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.