ಪಂದ್ಯ ಸೋತರೂ ಧೋನಿ ದಾಖಲೆಯನ್ನು ತಡೆಯೋರು ಯಾರು ಇಲ್ಲ..!?

0
317

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2019ರ ಐಪಿಎಲ್ ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಹೈದರಾಬಾದ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು 1 ರನ್‌ನಿಂದ ಮಣಿಸಿ ಮುಂಬೈ ಇಂಡಿಯನ್ಸ್ 4ನೇ ಬಾರಿಗೆ ಟ್ರೋಫಿಗೆ ಎತ್ತಿ ಹಿಡಿದಿದೆ.


ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ 29, ರೋಹಿತ್ ಶರ್ಮಾ 15, ಕೀರನ್ ಪೊಲಾರ್ಡ್ 41, ಇಶಾನ್ ಕಿಶಾನ್ 23 ರನ್ ನೆರವಿನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಪೇರಿಸಿತು.


149 ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ಪರ ಬ್ಯಾಟಿಂಗ್ ಆರ್ಭಟ ನಡೆಸಿದ ಶೇನ್ ವ್ಯಾಟ್ಸನ್ 80 ರನ್ ಬಾರಿಸಿ ತಂಡದ ಗೆಲುವಿನ ಹೀರೋ ಎನಿಸುವುದರಲ್ಲಿದ್ದರು ಅಂತಿಮ ಓವರ್‌ನಲ್ಲಂತೂ ಪಂದ್ಯ ರೋಚಕ ಘಟ್ಟವನ್ನು ತಲುಪಿತ್ತು.

ಕೊನೆಯ ಎಸೆತದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಗೆಲುವಿಗೆ 2 ರನ್‌ಗಳ ಅಗತ್ಯವಿತ್ತು ಆಗ ಮುಂಬೈ ವೇಗಿ ಲಸಿತ್ ಮಾಲಿಂಗಾ ಅಂತಿಮ ಎಸೆತಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಎಲ್‌ಬಿಡಬ್ಲ್ಯೂಮೂಲಕ ಔಟ್ ಮಾಡಿದ್ದರಿಂದ ಮುಂಬೈ ರೋಚಕ ಗೆಲುವಿನ ಸಂಭ್ರಮಾಚರಿಸುವಂತಾಯ್ತು.

ಫೈನಲ್ ನಲ್ಲಿ ಮ್ಯಾಚ್ ಸೋತರೂ ಸಹ ವಿಕೆಟ್‌ ಹಿಂಬದಿಯಲ್ಲಿ ಮಿಂಚಿನ ಕೈಚಳಕ ಪ್ರದರ್ಶಿಸುವ ವಿಕೆಟ್‌ಕೀಪರ್ ಎಂಎಸ್‌ ಧೋನಿ ಅವರ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.


ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ವಿಕೆಟ್ ಹಿಂದೆ ನಿಂತು ಅತಿ ಹೆಚ್ಚು ಔಟ್ ಗಳನ್ನು ಮಾಡಿದ ದಾಖಲೆ ಇದೀಗ ಧೋನಿ ಅವರದ್ದಾಗಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಧೋನಿ ಕ್ವಿಂಟನ್ ಡಿ’ಕಾಕ್ ಮತ್ತು ರೋಹಿತ್ ಶರ್ಮಾ ಅವರ ಕ್ಯಾಚ್‌ ಪಡೆಯುವ ಮೂಲಕ ಈ ದಾಖಲೆ ಬರೆದಿದ್ದಾರೆ.

ಇದಕ್ಕೂ ಮುನ್ನ ಕೋಲ್ಕೊತಾ ನೈಟ್‌ ರೈಡರ್ಸ್ ನ ನಾಯಕ ದಿನೇಶ್‌ ಕಾರ್ತಿಕ್‌ 131 ಔಟ್ ಮಾಡುವ ಮೂಲಕ ಈ ದಾಖಲೆ ಹೊಂದಿದ್ದರು.

LEAVE A REPLY

Please enter your comment!
Please enter your name here