No menu items!
11.1 C
Munich
Wednesday, April 29, 2026

ಸ್ವಿಗ್ಗಿಗೆ ಸುಗ್ಗಿಯಾದ 12ನೇ ಆವೃತ್ತಿ ಐಪಿಎಲ್..!

Must read

ಬರೋಬ್ಬರಿ 51 ದಿನಗಳ ಕಾಲ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ ಐಪಿಎಲ್ 12ನೇ ಆವೃತ್ತಿ ಮುಕ್ತಾಯವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 1 ರನ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಅನೇಕ ವಿಶೇಷತೆಗಳಿಗೆ, ವಿಭಿನ್ನ ದಾಖಲೆಗಳಿಗೆ ಸಾಕ್ಷಿಯಾಗಿದ್ದ ಈ ಬಾರಿಯ ಐಪಿಎಲ್ ಸ್ವಿಗ್ಗಿಗೂ ಸುಗ್ಗಿ ತಂದೆ. ಅಂದೆ ಸ್ವಿಗ್ಗಿಯ ಬ್ಯುಸ್​ನೆಸ್ ಅನ್ನು ಐಪಿಎಲ್ ಹೆಚ್ಚಿಸಿದೆ ಎಂದು ವರದಿಯಾಗಿದೆ.
ಮನೆಯಲ್ಲಿ ಅಡುಗೆ ಮಾಡಿ ಊಟ ಯಾರ್ ಮಾಡ್ತಾರೆ… ಐಪಿಎಲ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ ಎಂದು ಅಡುಗೆ ಮಾಡುವುದನ್ನು ಬಿಟ್ಟು ಫ್ರೀಯಾಗಿ , ಎಂಜಾಯ್ ಮಾಡುತ್ತಾ ಜನ ಐಪಿಎಲ್ ಪಂದ್ಯಗಳನ್ನು ಆಸ್ವಾಧಿಸಿದ್ದಾರೆ. ಅಡುಗೆ ಏನೋ ಮಾಡದೇ ಇರಬಹುದು…. ಆದರೆ ಸಮಯಕ್ಕೆ ಸರಿಯಾಗಿ ಹೊಟ್ಟೆ ಎಚ್ಚರಿಸುತ್ತದೆ ಅಲ್ಲವೇ? ಹೀಗಾಗಿ ಆನ್​ ಲೈನ್​ ನಲ್ಲಿ ಜನ ಊಟ, ತಿಂಡಿಯನ್ನು ಆರ್ಡರ್ ಮಾಡಿ ತರಿಸಿಕೊಂಡು ಐಪಿಎಲ್ ಹಬ್ಬವನ್ನು ಕಣ್ತುಂಬಿಕೊಂಡಿದ್ದಾರೆ!


ಆನ್​ಲೈನ್​ನಲ್ಲಿ ಫುಡ್ ಆರ್ಡರ್ ಅಂದ ಕೂಡಲೇ ನೆನಪಾಗುವ ಕೆಲವು ಪ್ರಮುಖ ಹೆಸರುಗಳಲ್ಲಿ ಸ್ವಿಗ್ಗಿ ಕೂಡ ಒಂದು. ಸ್ವಿಗ್ಗಿ ಐಪಿಎಲ್​ ವೇಳೆ ಉತ್ತಮ ಲಾಭ ಪಡೆದಿದೆ ಎನ್ನಲಾಗುತ್ತಿದೆ. ವರದಿಯೊಂದರ ಪ್ರಕಾರ ಈ ಬಾರಿಯ ಐಪಿಎಲ್​ ನಲ್ಲಿ ಸ್ವಿಗ್ಗಿ ವಹಿವಾಟು ಶೇ.30ರಷ್ಟು ಹೆಚ್ಚಿದೆಯಂತೆ.
ಒಟ್ಟಿನಲ್ಲಿ ಐಪಿಎಲ್ ಒಂದಿಷ್ಟು ಬ್ಯುಸ್​ನೆಸ್​ ಗೂ ವರದಾನವಾಗಿದೆ. ಈಗ ಐಪಿಎಲ್ ಮುಗಿದಿದೆ.. ಇನ್ನೇನು ಕೇವಲ ಹದಿನೆಂಟೇ ದಿನಗಳಲ್ಲಿ ವಿಶ್ವಕಪ್​ ಶುರುವಾಗಲಿದೆ. ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ನಡೆಯಲಿರುವ ವಿಶ್ವ ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಉತ್ಸುಕರಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article