ಪತ್ರಕರ್ತ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನ ಅವ್ವ ಪುಸ್ತಕಾಲಯದಿಂದ ಬಿಡುಗಡೆಯಾಗುತ್ತಿದೆ. ಇದೇ ಜುಲೈ 14, ಭಾನುವಾರದಂದು ಬೆಂಗಳೂರು ವಿಜಯನಗರದಲ್ಲಿರುವ ಎಂ. ಚಿದಾನಂದಮೂರ್ತಿ ಸಭಾಂಗಣದಲ್ಲಿ ಜರುಗುವ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಬರಹಗಾರರಾದ ಜೋಗಿ, ಯತಿರಾಜ್ ವೀರಾಂಬುಧಿ, ಪೂರ್ಣಿಮಾ ಮಾಳಗಿಮನಿ, ಮಹೇಶ್ ಅರಬಳ್ಳಿ ಹಾಗೂ ವೀರಲೋಕ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ರವೀಂದ್ರ ಮುದ್ದಿ ಅವರು ಬರೆದ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಒಟ್ಟು ವಿಭಿನ್ನ ಹತ್ತು ಕಥೆಗಳಿವೆ. ನಾಡಿನ ಹತ್ತು ಪ್ರಮುಖ ಬರಹಗಾರರು ಇಲ್ಲಿನ ಒಂದೊಂದು ಕಥೆಯನ್ನು ಒಬ್ಬೊಬ್ಬರು ಓದಿ ಆ ಕಥೆಯ ಬಗ್ಗೆ ಅವಲೋಕನ ಮಾಡಿದ್ದಾರೆ.