ಪುಟ್ಟ ಕಾಳಿನಲ್ಲಿ ಆರೋಗ್ಯದ ಗುಟ್ಟು: ಸಾಸಿವೆಯನ್ನು ಸೇವನೆಯಿಂದ ಪ್ರಯೋಜಗಳೇನು.?

Date:

ಪುಟ್ಟ ಕಾಳಿನಲ್ಲಿ ಆರೋಗ್ಯದ ಗುಟ್ಟು: ಸಾಸಿವೆಯನ್ನು ಸೇವನೆಯಿಂದ ಪ್ರಯೋಜಗಳೇನು.?

 

ಸಾಸಿವೆ, ಅಡುಗೆಗೆ ಬಳಸುವ ಪ್ರಮುಖ ಸಾಂಬಾರ ಪದಾರ್ಥಗಳಲ್ಲಿ ಒಂದಾಗಿದೆ. ತುಂಬಾ ಸಣ್ಣದಾದರೂ, ಇದರಲ್ಲಿರುವ ಆರೋಗ್ಯ ಲಾಭಗಳು ಅತ್ಯಂತ ಮಹತ್ವದವು. ಪ್ರತಿಯೊಂದು ಮನೆಯಲ್ಲಿ ಅಡುಗೆಗೆ ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಉತ್ತರ ಭಾರತೀಯ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಸಾಸಿವೆ ಎಣ್ಣೆಯಲ್ಲಿ ಹಲವಾರು ಆರೋಗ್ಯ ಲಾಭಗಳಿವೆ. ನಿತ್ಯ ಆಹಾರದಲ್ಲಿ ಸಾಸಿವೆ ಸೇರಿಸಿದರೆ, ದೇಹಕ್ಕೆ ಇದರ ಲಾಭಗಳು ದೊರೆಯುತ್ತವೆ.

ಸಾಸಿವೆ ಕೇವಲ ರುಚಿ ಮಾತ್ರವಲ್ಲ, ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ನೇರವಾಗಿ ತಿನ್ನಲಾಗುವುದಿಲ್ಲ; ಎಣ್ಣೆಯಲ್ಲಿ ಕರಿದು ಸೇವಿಸುವುದು ಉತ್ತಮ. ಸಾಸಿವೆ ಎಣ್ಣೆಯ ಬಳಕೆಯಿಂದ ಆಹಾರದ ರುಚಿ ಮತ್ತು ಪರಿಮಳ ಎರಡೂ ಹೆಚ್ಚಾಗುತ್ತವೆ, ಆದ್ದರಿಂದ ಇದನ್ನು ಅಡುಗೆಯಲ್ಲಿ ಹೆಚ್ಚು ಬಳಸುತ್ತಾರೆ.

ಪ್ರಮುಖ ಆರೋಗ್ಯ ಲಾಭಗಳು:

ಮೂಳೆಗಳ ಬಲ: ಸಾಸಿವೆ ಮತ್ತು ಸಾಸಿವೆ ಎಣ್ಣೆಯಲ್ಲಿ ಶಕ್ತಿವರ್ಧಕ ಗುಣಗಳು ಮತ್ತು ಖನಿಜಾಂಶಗಳು ಹೆಚ್ಚಾಗಿವೆ, ಇದು ಮೂಳೆಗಳನ್ನು ಬಲಪಡಿಸುತ್ತದೆ.

ಹೃದಯ ಆರೋಗ್ಯ: ಹೃದಯದ ಆರೋಗ್ಯ ಕಾಪಾಡಲು ಸಹಾಯಮಾಡುತ್ತದೆ.

ರೋಗ ನಿರೋಧಕ ಶಕ್ತಿ: ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯಕಾರಿ.

ಕೂದಲು ಆರೋಗ್ಯ: ಕೂದಲು ಉದುರುವಿಕೆ ಕಡಿಮೆ ಮಾಡಿ, ತಲೆಹೊಟ್ಟೆ ಸಮಸ್ಯೆ ನಿವಾರಣೆ, ಕೂದಲು ದಟ್ಟವಾಗಿ ಬೆಳೆಯಲು ಸಹಾಯ.

ಕ್ಯಾನ್ಸರ್ ತಡೆ: ಕೆಲವು ಕ್ಯಾನ್ಸರ್ ಕಾಯಿಲೆಗಳನ್ನು ತಡೆಯುವಲ್ಲಿ ಪಾತ್ರವಹಿಸುತ್ತದೆ.

ಹಲ್ಲು, ನಾಲಗೆ ಮತ್ತು ಒಸಡುಗಳು: ಹಲ್ಲುಗಳ ಆರೋಗ್ಯ ಕಾಪಾಡುತ್ತದೆ, ಮಕ್ಕಳ ಹಲ್ಲುಗಳ ಬೆಳವಣಿಗೆಗೆ ಸಹಾಯಕ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...