ಪುನೀತ್ ಮನೆಗೆ ಆಗಮಿಸಿದ ಚಿನ್ನಾಭರಣ ಪರಿಶೋಧಕರು..!!
ಇಂದು ಬೆಳ್ಳಗೆಯಿಂದ ಐಟಿ ಅಧಿಕಾರಿಗಳು ಕನ್ನಡ ಚಿತ್ರರಂಗದ ಸ್ಟಾರ್ ನಟರ ಮನೆ ಮೇಲೆ ದಾಳಿ ನಡೆಸಿದ್ದಾರೆ.. ಕಿಚ್ಚ ಸುದೀಪ್, ಶಿವಣ್ಣ, ಯಶ್ ಸೇರಿದಂತೆ ಪುನೀತ್ ರಾಜ್ ಕುಮಾರ್ ಅವರ ಮನೆ ಮೇಲು ಐಟಿ ದಾಳಿ ನಡೆದಿದೆ.. ಇನ್ನು ಅಧಿಕಾರಿಗಳು ಪುನೀತ್ ರಾಜ್ ಕುಮಾರ್ ಅವರ ಮನೆಗೆ ಮೂರು ಚಿನ್ನಾಭರಣ ಪರಿಶೋಧಕರನ್ನ ಕರೆಸಿಕೊಂಡಿದೆ..
ಇವರು ಚಿನ್ನಾಭರಣವನ್ನ ಅಳತೆ ಮಾಡುವ ತಕ್ಕಡಿಯನ್ನ ತಂದಿದ್ದು, ಮನೆಯಲ್ಲಿರುವ ಆಭರಣಗಳ ಅಳತೆಯನ್ನ ಮಾಡಲ್ಲಿದ್ದಾರೆ.. ನಿನ್ನೆಯೇ ಕೋರ್ಟ್ ನಿಂದ ದಾಳಿಯ ಬಗ್ಗೆ ಅನುಮತಿಯನ್ನ ಪಡೆದುಕೊಂಡು ಇಂದು ಬೆಳಗ್ಗೆ ಏಕಕಾಲದಲ್ಲಿ ಎಲ್ಲ ಕಡೆಗೆ ಐಟಿ ಇಲಾಖೆ ದಾಳಿ ನಡೆಸಿದೆ.. ಇದರಲ್ಲಿ ಕನ್ನಡದ ನಟರು ಮಾತ್ರವಲ್ಲ ಹೆಸರಾಂತ ನಿರ್ಮಾಪಕರು ಸಹ ಸೇರಿದ್ದಾರೆ..