ಅಭಿನಯ ಚಕ್ರವರ್ತಿ, ಕಿಚ್ಚ, ರನ್ನ, ಮಾಣಿಕ್ಯ… ಹೀಗೆ ಹತ್ತಾರು ಬಿರುದುಗಳಿಂದ ಕರೆಸಿಕೊಳ್ಳುವ ಕನ್ನಡದ ಹೆಮ್ಮೆಯ ನಟ ಸುದೀಪ್ ಬಾದ್ ಷಾ ಸುದೀಪ್ ಆಗಿ ‘ಪೈಲ್ವಾನ್’ ಗೆಟಪ್ ನಲ್ಲಿ ರಾರಾಜಿಸಲು ಬರುತ್ತಿದ್ದಾರೆ. ಕಿಚ್ಚನ ಪೈಲ್ವಾನ್ ದರ್ಶನಕ್ಕೆ ಈಗಾಗಲೇ ವಿಶ್ವದಾದ್ಯಂತ ಥಿಯೇಟರ್ ಗಳೆಂಬ ಅಖಾಡಗಳು ಸಕಲ ಸನ್ನದ್ಧವಾಗಿವೆ. ಕಿಚ್ಚ ಬರ್ತಿದ್ದಾರಂತ ಥಿಯೇಟರ್ ಗಳಿಂದ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ. ಪೈಲ್ವಾನ್ ದರ್ಶನಕ್ಕೆ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಚಿತ್ರರಂಗ, ಅಲ್ಲಿನ ಅಭಿಮಾನಿಗಳು ಕೂಡ ಕಾತುರದಿಂದ ಕಾಯ್ತಿದ್ದಾರೆ.
ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಆಗಿ ಸುದೀಪ ನಿಮ್ಮ ಮುಂದೆ ಬರಲಿದ್ದಾರೆ. ಪೋಸ್ಟರ್, ಟೀಸರ್, ಟ್ರೈಲರ್ , ಹಾಡುಗಳಿಂದ ನಿರೀಕ್ಷೆ ಹೆಚ್ಚಿಸಿರುವ ಪೈಲ್ವಾನ್ ಖದರ್ ಹೇಗಿರುತ್ತೆ ಎನ್ನುವ ಕುತೂಹಲ ಇಡೀ ವಿಶ್ವ ಸಿನಿ ಪ್ರಿಯರದ್ದಾಗಿದೆ. ಸ್ಯಾಂಡಲ್ ವುಡ್ ನ ಕಣ್ಮಣಿ ಸುದೀಪ್ ಬಾಲಿವುಡ್ , ಟಾಲಿವುಡ್ ಗೆ ಚಿರಪರಿಚಿತ.. ಕಾಲಿವುಡ್ ಮತ್ತು ಮಾಲಿವುಡ್ ಗೆ ಗೊತ್ತಿಲ್ಲದೇ ಇರುವವರಲ್ಲ. ಎಲ್ಲಾ ಕಡೆ ಸುದೀಪ್ ಫ್ಯಾನ್ಸ್ ಇದ್ದಾರೆ…ಎಲ್ಲಾ ಚಿತ್ರರಂಗದವರಿಗೂ ಸುದೀಪ್ ಅಚ್ಚುಮೆಚ್ಚಿನ ಗೆಳೆಯ. ಹೀಗಾಗಿ ಪಂಚ ಭಾಷೆಗಳಲ್ಲಿ ಸುದೀಪ್ ಸಿನಿಮಾ ಬರ್ತಿರುವುದರಿಂದ ಕುತೂಹಲ ಸಹಜವಾಗಿಯೇ ಹೆಚ್ಚಿದೆ.
ಸುದೀಪ್ ಗೆ ಈ ಹಿಂದೆ ಹೆಬ್ಬುಲಿ ಸಿನಿಮಾದಲ್ಲಿ ಆ್ಯಕ್ಷನ್ ಕಟ್ ಹೇಳಿದ್ದ ಕೃಷ್ಣರವರೇ ಪೈಲ್ವಾನ್ ಡೈರೆಕ್ಟರ್.
ಸುದೀಪ್ ಮತ್ತು ಕೃಷ್ಣ ಕಾಂಬಿನೇಷನ್ ನ ಈ ಸಿನಿಮಾದ ನಾಯಕಿ ಆಕಾಂಕ್ಷ ಸಿಂಗ್. ಬಾಲಿವುಡ್ ನ ಖ್ಯಾತ ನಾಮರಾದ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ದೊಡ್ಡ ತಾರಗಣವನ್ನು ಪೈಲ್ವಾನ್ ಹೊಂದಿದ್ದಾನೆ.
ಈ ಪೈಲ್ವಾನ್ ದರ್ಶನಕ್ಕೆ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಮಳೆಗಾಲದಲ್ಲಿ ಬಿಸಿಬಿಸಿ ಭಜ್ಜಿ, ಕಡ್ಲೆಪುರಿ ಸೇಲಾದಂತೆ ಪಟಪಟ ಅಂತ ಟಿಕೆಟ್ ಸೇಲಾಗುತ್ತಿದೆ.
ನೀವಿನ್ನೂ ಟಿಕೆಟ್ ಬುಕ್ ಮಾಡಿಲ್ಲ ಎಂದಾದ್ರೆ ಈಗಲೇ ಮಾಡಿ…ಯಾಕಂದ್ರೆ ಸದ್ಯದಲ್ಲೇ ಟಿಕೆಟ್ ಖಾಲಿ ಆಗಲಿದೆ…