ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಬಿಡುಗಡೆಗೊಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ತಿಂಗಳು ತುಂಬುವುದರೊಳಗೆ ಮುಖ್ಯ ಚಿತ್ರಮಂದಿರದಿಂದ ಪೊಗರು ಚಿತ್ರವನ್ನು ಎತ್ತಂಗಡಿ ಮಾಡಲಾಯಿತು. ಆದಷ್ಟು ಬೇಗ ಟಿವಿಯಲ್ಲಿ ಪೊಗರು ಚಿತ್ರ ಪ್ರಸಾರವಾಗಲಿದೆ ಎಂಬ ಸುದ್ದಿ ಈ ಹಿಂದೆ ಹಬ್ಬಿತ್ತು.
ಆದರೆ ಇದೀಗ ಯಾವ ಚಾನೆಲ್ ನಲ್ಲಿ ಮತ್ತು ಯಾವ ದಿನಾಂಕದಂದು ಪೊಗರು ಚಿತ್ರ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಇದೇ ಏಪ್ರಿಲ್ 13 ರಂದು ಪೊಗರು ಚಿತ್ರವನ್ನು ಉದಯ ಟಿವಿ ಪ್ರಸಾರ ಮಾಡುತ್ತಿದೆ. ಇಷ್ಟು ಬೇಗ ಟೀವಿಯಲ್ಲಿ ಪೊಗರು ಚಿತ್ರ ಪ್ರಸಾರವಾಗುತ್ತಿರುವುದನ್ನು ಕಂಡು ಸಿನಿಪ್ರೇಕ್ಷಕರು ಆಶ್ಚರ್ಯಗೊಂಡಿದ್ದಂತೂ ನಿಜ.