ಮೂರು ದಿನಗಳ ನಿಷೇಧಾಜ್ಞೆ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಾವಿರಾರು ಮಂದಿ ಸ್ವಯಂಪ್ರೇರಿತವಾಗಿಯೇ ಹೋರಾಟದಲ್ಲಿ ಧುಮುಕಿದ್ದು, ನಗರದ ಬಹುತೇಕ ಕಡೆಗಳ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿ ಮುಂದುವರಿದಿದೆ. ಟೌನ್ ಹಾಲ್ ಬಳಿ ಭಾರಿ ಜನಸಂಖ್ಯೆ ಸೇರಿ ಪ್ರತಿಭಟನೆ ನೆಡೆಸಿದರು ಪೋಲಿಸರು ಪ್ರತಿಭಟನಾ ಕಾರರ ಬಳಿ ಮಾತನಾಡಿ ಸ್ಥಳದಿಂದ ಕಳಿಹಿಸಲಾಯಿತು.
ನಗರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದು ಯಾವುದೇ ಪ್ರತಿಭಟನೆಗಳಿಗೂ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿ ಟೌನ್‌ಹಾಲ್ ಎದುರು ಪ್ರತಿಭಟನೆ ಅಥವಾ ಪ್ರದರ್ಶನ ನಡೆಸಿದ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.