ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವಾಗ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿಚಾರವಾಗಿ ಶೋಭಾ ಕರಂದ್ಲಾಜೆ ಅವರು ಪ್ರತಿಕ್ರಿಯೆ ನೀಡಿದ್ದಾರೆ ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಖಾದರ್‌ರವರು ಮಾಡಿದ ಪ್ರಚೋದನಾಕಾರಿ ಭಾಷಣ ನೀಡಿದ 24 ಗಂಟೆಯಲ್ಲಿ ಮಂಗಳೂರಿನಲ್ಲಿ ಬೆಂಕಿ ಬಿದ್ದಿದೆ. ಇದರ ಹೊಣೆಯನ್ನು ಕಾಂಗ್ರೆಸ್‌ನ ನಾಯಕರು ಹೊರಬೇಕಿದೆ ಎಂದು ಅವರು ಹೇಳಿದ್ದಾರೆ .
ಬಂದರು ಅತ್ಯಂತ ಸೂಕ್ಷ್ಮ ಪ್ರದೇಶ. ಅಲ್ಲಿನ ನಾಲ್ಕೂ ರಸ್ತೆಗಳನ್ನು ಸಾವಿರಾರು ಜನರು ಮುತ್ತಿಗೆ ಹಾಕಿ ಪೊಲೀಸ್ ಠಾಣೆಯ ಬಂದೂಕುಗಳನ್ನು ಕೊಂಡೊಯ್ದು, ಅದನ್ನು ಮಾರಕವಾಗಿ ಬಳಸಬೇಕೆಂದು ಮುಂದಾಗಿದ್ದಾಗ ಪೊಲೀಸರು ಗೋಲಿಬಾರ್ ಕ್ರಮ ಕೈಗೊಂಡಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಕಾರ್ಯ ಪ್ರಚೋದನಕಾರಿ ಭಾಷಣದಿಂದ ಆರಂಭಗೊಂಡು ಅದು ನಿಜವಾಗಿಯೂ ಬೆಂಕಿ ಹಚ್ಚಿದೆ. ಇನ್ನು ಶಾಂತಿ ನೆಲೆಸಬೇಕು. ಪ್ರಚೋದನೆ ಮಾಡಿದವರ ಮೇಲೆ ತನಿಖೆ ಆಗಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು