ಪ್ರತಿ ಗುರುವಾರ ಇದನ್ನು ಮಾಡಿದ್ರೆ ಅದೃಷ್ಟ ಮನೆಬಾಗಿಲಿಗೆ ಬರುತ್ತಂತೆ!

Date:

ಪ್ರತಿ ಗುರುವಾರ ಇದನ್ನು ಮಾಡಿದ್ರೆ ಅದೃಷ್ಟ ಮನೆಬಾಗಿಲಿಗೆ ಬರುತ್ತಂತೆ!

ನಿಮ್ಮ ಕಠಿಣ ಪರಿಶ್ರಮದ ಪೂರ್ಣ ಫಲಿತಾಂಶವನ್ನು ನೀವು ಪಡೆಯಲು ಬಯಸಿದರೆ ಅಥವಾ ಅದೃಷ್ಟವನ್ನು ಹೊಂದಲು ಬಯಸಿದರೆ ಗುರುವಾರದ ದಿನದಂದು ಇವುಗಳನ್ನು ತಪ್ಪದೇ ಮಾಡುವುದು ಉತ್ತಮ.

ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯದ ಪ್ರಕಾರ, ಬಣ್ಣವು ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಂತೋಷ ಮತ್ತು ಅದೃಷ್ಟವನ್ನು ಬಯಸುವ ವ್ಯಕ್ತಿ ಗುರುವಾರ ಕೆಂಪು, ಕಪ್ಪು, ನೀಲಿ ಇತ್ಯಾದಿಗಳ ಬದಲಿಗೆ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಬೇಕು. ಈ ದಿನದಂದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಗುರುವಿನ ಸಂಪೂರ್ಣ ಆಶೀರ್ವಾದವನ್ನು ನೀವು ಪಡೆದುಕೊಳ್ಳುವಿರಿ ಎನ್ನುವ ನಂಬಿಕೆಯಿದೆ.

ಅರಿಶಿನ ಸ್ನಾನ:-

ಹಿಂದೂ ಧರ್ಮದಲ್ಲಿ ಅರಿಶಿನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪ್ರತಿ ಶುಭ ಕಾರ್ಯದಲ್ಲಿ ಬಳಸುವ ಅರಿಶಿನವನ್ನು ಗುರುವಾರದ ದಿನದಂದು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಬೇಕು. ಇದರಿಂದ ಓರ್ವ ವ್ಯಕ್ತಿಯು ಅದೃಷ್ಟವನ್ನು ಪಡೆಯುತ್ತಾನೆ. ಈ ಪರಿಹಾರದಿಂದ, ದೇವಗುರು ವ್ಯಕ್ತಿಯ ಜಾತಕದಲ್ಲಿ ಮಂಗಳಕರ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ.

ಬಾಳೆ ಮರೆದ ಪೂಜೆ:-

ಓರ್ವ ವ್ಯಕ್ತಿ ಗುರುವಾರದಂದು ತನ್ನ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿದ ನಂತರ, ವಿಧಿವಿಧಾನದಂತೆ ಬಾಳೆಗಿಡವನ್ನು ಪೂಜಿಸಿದರೆ ಅವನ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳು ಕಣ್ಣು ಮಿಟುಕಿಸುವುದರೊಳಗೆ ದೂರಾಗುತ್ತವೆ. ಮತ್ತು ಅವನು ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾನೆ ಎನ್ನುವ ನಂಬಿಕೆಯಿದೆ. ಸಂತೋಷ ಮತ್ತು ಅದೃಷ್ಟವನ್ನು ಅವನು ಪಡೆಯುತ್ತಾನೆ. ಗುರುವಾರದಂದು ಈ ಪರಿಹಾರವನ್ನು ಮಾಡುವುದರಿಂದ ವಿವಾಹದಲ್ಲಿ ಎದುರಾಗುವ ಎಲ್ಲಾ ರೀತಿಯ ಅಡೆತಡೆಗಳು ಶೀಘ್ರದಲ್ಲೇ ನಿವಾರಣೆಯಾಗುತ್ತದೆ.

ಇವುಗಳನ್ನು ದಾನ ಮಾಡಿ:-

ಹಿಂದೂ ಧರ್ಮದಲ್ಲಿ, ದೇವರು-ದೇವತೆಗಳ ಮತ್ತು ನವಗ್ರಹಗಳ ಆಶೀರ್ವಾದವನ್ನು ಪಡೆಯಲು, ಕೇವಲ ಪೂಜೆ, ಜಪ ಮತ್ತು ತಪಸ್ಸು ಮಾತ್ರವಲ್ಲದೆ ದಾನವನ್ನು ಮಾಡಬೇಕೆಂದು ಸೂಚಿಸಲಾಗಿದೆ. ಹಿಂದೂ ನಂಬಿಕೆಯ ಪ್ರಕಾರ, ಒಬ್ಬ ವ್ಯಕ್ತಿಯು ಗುರುವಾರ ದೇವಸ್ಥಾನಕ್ಕೆ ಹೋಗಿ ಹಳದಿ ಬಟ್ಟೆ, ಹಳದಿ ಹಣ್ಣುಗಳು, ಬೇಳೆ ಕಾಳುಗಳು, ಧಾರ್ಮಿಕ ಪುಸ್ತಕಗಳು, ಕುಂಕುಮ, ಅರಿಶಿನ ಇತ್ಯಾದಿಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದರೆ, ಅವನು ತನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸಂತೋಷವನ್ನು ಪಡೆಯುತ್ತಾನೆ ಮತ್ತು ಅವನ ಅದೃಷ್ಟವು ಬೆಳಗಲು ಪ್ರಾರಂಭವಾಗುತ್ತದೆ.

ದೀಪದಿಂದ ಹಣದ ಸಮಸ್ಯೆ ದೂರಾಗುವುದು

ಕಷ್ಟಪಟ್ಟು ದುಡಿದರೂ ಹಣದ ಸಮಸ್ಯೆ ನಿಮ್ಮನ್ನು ಕಾಡಲು ಪ್ರಾರಂಭವಾದರೆ ನೀವು ವಿಶೇಷವಾಗಿ ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಗೆ ಗುರುವಾರದಂದು ಕುಂಕುಮ ತಿಲಕವನ್ನು ಹಚ್ಚಿ ಪೂಜಿಸಬೇಕು. ಗುರುವಾರದಂದು ಆಲದ ಮರದ ಬಳಿ ಶುದ್ಧ ದೇಸಿ ತುಪ್ಪದ ದೀಪವನ್ನು ಬೆಳಗಿಸಬೇಕು. ಇದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಅವಳು ನಿಮಗೆ ಆಶೀರ್ವಾದವನ್ನು ನೀಡುತ್ತಾಳೆ. ಇದು ನಿಮ್ಮ ಜೀವನದ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ.

Share post:

Subscribe

spot_imgspot_img

Popular

More like this
Related

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ !

ನವರಾತ್ರಿ ಒಂಬತ್ತನೇ ದಿನದ ಪೂಜೆ – ಸಿದ್ಧಿದಾತ್ರಿಯ ಆರಾಧನೆ ! ಒಂಬತ್ತನೇ ದಿನ...

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...