ಪ್ರೇಕ್ಷಕರ ಮನಗೆದ್ದ ರತ್ನ ಮಂಜರಿ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ .

Date:

ಶುಕ್ರವಾರ ತೆರೆ ಕಂಡ ಆ ರತ್ನ ಮಂಜರಿ ಚಿತ್ರ ಪ್ರೇಕ್ಷಕರ ಮನಗೆದ್ದಿದೆ ಪದ್ಧತಿ ಪ್ರದರ್ಶನವನ್ನು ಕಾಣುತ್ತಿದೆ ಹಾಗೂ ಈ ಚಿತ್ರ ನೈಜಘಟನೆಯಾಧಾರಿತ ದ್ದಾಗಿದೆ.ಸಿನಿಪ್ರಿಯರಿಗೆ ಈ ಚಿತ್ರ ತಾಜಾ ಅನುಭವವನ್ನು ನೀಡುವುದು ಮಾತ್ರವಲ್ಲದೆ, ಈ ಮಾದರಿಯ ಚಿತ್ರಗಳು ಕನ್ನಡದಲ್ಲಿ ಇನ್ನೂ ಹೆಚ್ಚೆಚ್ಚು ಬಿಡುಗಡೆಯಾಗಲಿ ಎಂಬ ತುಡಿತವನ್ನು ಹೆಚ್ಚು ಮಾಡುವುದು ಸುಳ್ಳಲ್ಲ.ಯುವ ತಂಡ ಸೇರಿಕೊಂಡು, ಯಾವುದೇ ಅನುಭವಿ ತಂಡಕ್ಕಿಂತ ನಾವೇನು ಕಮ್ಮಿಯಿಲ್ಲ ಎಂಬಂತೆ ನಿರ್ಮಿಸಿರುವ ಚಿತ್ರಕೌತುಕ ಭರಿತ ರಹಸ್ಯವನ್ನು ನೀವು ತಿಳಿಯಬೇಕೆಂದರೆ ಚಿತ್ರವನ್ನು ತಪ್ಪದೇ ಚಿತ್ರಮಂದಿರಗಳಲ್ಲಿ ನೋಡಲೇಬೇಕು.

ಮರ್ಡರ್ ಮಿಸ್ಟರಿ ಹೊಂದಿರುವ ಈ ಚಿತ್ರದಲ್ಲಿ ಕೇವಲ ಕ್ಯೂರಿಯಾಸಿಟಿ, ಸೀರ್ಯಸ್ ನೋಟ್ ಗಳಷ್ಟೇ ಇರುತ್ತದೆ ಎಂದು ಊಹಿಸಬಹುದು. ಈಗಾಗಲೇ ಬಂದಿರುವ ಬಹಳಷ್ಟು ಸಿನಿಮಾಗಳಲ್ಲಿ ಅಂತಹುಗಳೇ ಇರುವಂತದ್ದು. ಆದರೆ ಹೊಸಬರ ರತ್ನಮಂಜರಿ ಮರ್ಡರ್ ಮಿಸ್ಟರಿ ಸಿನಿಮಾವಾಗಿದ್ದರೂ ಸಹ ಸಂಪೂರ್ಣ ಮರ್ಡರ್ ಮಿಸ್ಟರಿ ಜಾನರ್ ಗೆ ತಗುಲಿಕೊಳ್ಳದೇ ಪ್ರೇಕ್ಷಕರು ಚಕಿತಗೊಳಿಸುವ ಸಾಕಷ್ಟು ಸೀಕ್ರೆಟ್ ಗಳನ್ನು ರತ್ನಮಂಜರಿ ಹೊಂದಿರುವುದು ವಿಶೇಷ. ಅಲ್ಲದೇ ಕಾಮಿಡಿ ಕಿಂಗ್ ಸಾಧುಕೋಕಿಲಾ ರತ್ನಮಂಜರಿಯಲ್ಲಿ ಅಭಿನಯಿಸಿದ್ದು, ಅವರಿದ್ದ ಕಡೆ ಕಾಮಿಡಿಗೆ ಬರವೆಲ್ಲಿಂದ ಬಂತು. ಇನ್ನೂ ಮೇಲಾಗಿ ಕಾಮಿಡಿಯ ಜತೆಗೆ ರತ್ನಮಂಜರಿಯಲ್ಲಿ ಸೆಂಟಿಮೆಂಟ್ ಇದೆ. ರೊಮ್ಯಾನ್ಸ್ ಇದೆ. ಫೈಟ್ಸ್ ಇದೆ. ಡ್ಯಾನ್ಸ್ ಕೂಡ ಇದೆ. ಮನರಂಜನೆಯನ್ನು ಬಯಸಿ ಥಿಯೇಟರ್ ಗೆ ಬರುವ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿ ಮಾಡದೇ ರತ್ನಮಂಜರಿ ತಯಾರಾಗಿರುವುದು ಪ್ಲಸ್ ಪಾಯಿಂಟ್ ಆಗಿದೆ.

ಶರಾವತಿ ಫಿಲ್ಮ್ಸ್ ಹಾಗೂ ಎಸ್ ಎನ್ ಎಸ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಎಸ್.ಸಂದೀಪ್ ಕುಮಾರ್ ಹಾಗೂ ನಟರಾಜ್ ಹಳೇಬೀಡು ಯು.ಎಸ್.ಎ ನಿರ್ಮಾಣದಲ್ಲಿ ಮೂಡಿಬಂದಿರುವ ರತ್ನಮಂಜರಿ ಮೊದಲ ದಿನವೇ ಜನರ ಮನಗೆದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ ನೀವು ಕೂಡ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ರತ್ನ ಮಂಜರಿ ಚಿತ್ರವನ್ನು ನೋಡಿ ಹೊಸಬರ ಪ್ರಯತ್ನಕ್ಕೆ ಪ್ರೋತ್ಸಾಹಿಸಬೇಕು .

ಇನ್ನು ಈ ಚಿತ್ರದಲ್ಲಿ  ಮುಖ್ಯಭೂಮಿಕೆಯಲ್ಲಿ ನಟಿಸಿದ ರಾಜ್ ಚರಣ್ ಹಾಗೂ ಆಖಿಲಾ ಪ್ರಕಾಶ್ ಚಿತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ.ನಾಗತಿಹಳ್ಳಿ ರವರ ಗರಡಿಯಲ್ಲಿ ಪಳಗಿರುವ ಈ ಯುವ ನಟರು ” ರತ್ನಮಂಜರಿ ” ಚಿತ್ರದಲ್ಲಿ ನಾಯಕ- ನಾಯಕಿಯಾಗಿ ತಮ್ಮ ಪಾತ್ರ ಜೀವ ತುಂಬಿದ್ದಾರೆ ಇನ್ನು ಕೊಡಗಿನ ಪೃಕೃತಿ ಸೌಂದರ್ಯವನ್ನು ಪ್ರೀತಮ್ ತಗ್ಗಿನಮನೆ ರವರ ಕ್ಯಾಮೆರಾ ಅಮೋಘವಾಗಿ ಸೆರೆಹಿಡಿದಿರುವ ರೀತಿ ಪ್ರೇಕ್ಷಕನ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ .

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...