ಫೇಸ್ ಬುಕ್ ಗೆ ತನ್ನ ಫೋಟೋ ಅಪ್ ಲೋಡ್ ಆದ ಕಾರಣ ಇದೀಗ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ಯುವತಿ ಸುಧಾರಾಣಿ ಬಿರಾದರ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಕೆರೂಟಗಿ ಗ್ರಾಮದ ಶಿವಾನಂದ ಬಿರಾದಾರ ಎಂಬ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು.
ಈ ಇಬ್ಬರೂ ಸಹ ಪರಸ್ಪರ ಪಾರ್ಕ್ ಮತ್ತು ಇನ್ನಿತರ ಸ್ಥಳಗಳಲ್ಲಿ ಸುತ್ತಾಡುತ್ತಿದ್ದರು ಮತ್ತು ಈಕೆ ಕೋಚಿಂಗ್ ಸೆಂಟರ್ ಗೆ ಹೋದಾಗಲೂ ಸಹ ಆತ ಆಕೆಯನ್ನು ಅಲ್ಲಿ ಭೇಟಿ ಮಾಡುತ್ತಿದ್ದ. ಹೀಗೆ ಇಬ್ಬರ ನಡುವೆ ಪ್ರೀತಿ ಇದ್ದ ಕಾರಣ ಇಬ್ಬರು ಕೆಲವೊಂದಷ್ಟು ಸೆಲ್ಫಿ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಹೀಗಿರುವಾಗ ಈಕೆಯ ಪ್ರಿಯತಮ ಇಬ್ಬರು ಜೊತೆ ಇರುವ ಫೋಟೊವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾನೆ. ಇದರಿಂದ ಮನನೊಂದ ಯುವತಿ ತನ್ನ ವಿಷಯ ಎಲ್ಲರಿಗೂ ತಿಳಿದು ಹೋಗಿದೆ ಎಂದು ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದರು.