ಕಳೆದೆರೆಡು ದಿನಗಳ ಹಿಂದೆ ರಮಣಿಯ ದ್ವೀಪವನ್ನು ತಲುಪಿರುವ ಹರಿಪ್ರಿಯಾ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಇಲ್ಲಿನ ಪ್ರಕೃತಿ ಸೌಂದರ್ಯ ಬಹಳ ಸೊಗಸು. ಫುಡ್ ಕೂಡಾ ಎಂಜಾಯ್ ಮಾಡುತ್ತಿದ್ದೇನೆ. ಆಗಾಗ್ಗೆ ಹೀಗೆ ಟ್ರಿಪ್ ಹೋಗುವುದು ಮನಸ್ಸನ್ನು ಫ್ರೆಶ್ ಮಾಡುತ್ತದೆ. ಎಂಜಾಯಿಂಗ್ ಮಚ್’ ಎಂದಿದ್ದಾರೆ.
ಸದ್ಯ ಹರಿಪ್ರಿಯಾ ವೆಕೆಷನ್ ಮೂಡ್ ನಲ್ಲಿದ್ದು, ಚಿತ್ರರಂಗದಿಂದ ವಿಶ್ರಾಂತಿ ತೆಗೆದುಕೊಂಡು ಜಾಲಿಟ್ರಿಪ್ ಗೆ ಹೊಗಿದ್ದಾರೆ. ಅಂದಹಾಗೆ ಅವರು 25 ಸಿನಿಮಾಗಳಲ್ಲಿ ನಟಿಸಿದ್ದು, ‘ಬೆಲ್ ಬಾಟಂ’ ಚಿತ್ರದ ಸಕ್ಸಸ್ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಅವರನ್ನು ಅರಸಿ ಬರುತ್ತಿವೆ