ಬಿಗ್ ಬಾಸ್… ‘ ಏನ್ ಸ್ವಾಮಿ’ ಇದೆಲ್ಲಾ?

Date:

ಕನ್ನಡದ ಬಹುನಿರೀಕ್ಷಿತ ಕಿರುತೆರೆ ರಿಯಾಲಿಟಿ ಶೋ‌ ಬಿಗ್ ಬಾಸ್ ಸೀಸನ್ 7 ಶುರುವಾಗಿದೆ. ದೊಡ್ಮನೆಗೆ ಯಾರೆಲ್ಲಾ ಹೋಗ್ತಾರೆ ಎಂಬ ಅಂತೆ- ಕಂತೆ ಸುದ್ದಿಗಳಿಗೆ ಬ್ರೇಕ್ ಬಿದ್ದಿದೆ. ಹೋಸ್ಟ್‌ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವೇದಿಕೆ ಏರುತ್ತಿದ್ದಂತೆ ಇಡೀ ಕರ್ನಾಟಕ ಕಲರ್ಸ್ ಕನ್ನಡ ಚಾನಲ್ ಹಾಕ್ಕೊಂಡು ಕುಳಿತಿತ್ತು. ಸುದೀಪ್ ಗ್ರಾಂಡ್ ಎಂಟ್ರಿ ಕೊಡ್ತಾ ಇದ್ದಂತೆ ರಿಯಾಲಿಟಿ ಶೋ ಜೋಶ್ ಭಾನೆತ್ತರಕ್ಕೆ ಹೋಗಿತ್ತು. ‘ಮಾಣಿಕ್ಯ’ ನ ಆಗಮನದೊಂದಿಗೆ ಬಿಗ್ ಬಾಸ್ ಸೀಸನ್ 7 ಶುಭಾರಂಭವಾಯ್ತು.‌ ಕಿಚ್ಚ ಪ್ರೀತಿಯಿಂದ ಕಂಟೆಸ್ಟೆಂಟ್ ಗಳನ್ನು ಮಾತಾಡಿಸಿ, ಕಾಲೆಳೆದು, ತಮಾಷೆ ಮಾಡಿ ಆತ್ಮೀಯವಾಗಿ ಬಿಗ್ ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಬಾರಿ‌ 18 ಮಂದಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಕಾಮನ್ ಮ್ಯಾನ್ಸ್ ಯಾರಿಲ್ಲ ಬರೀ ಸೆಲೆಬ್ರಿಟಿಗಳು…! ವಿಷಯ ಏನಪ್ಪಾ ಅಂದ್ರೆ ಈ ಸೆಲೆಬ್ರಿಟಿಗಳಲ್ಲಿ ಬಹುತೇಕರ ಪರಿಚಯವೇ ಇಲ್ಲ..! ಸೆಲೆಬ್ರಿಟಿ ಅನ್ನೋ ಪದಕ್ಕೆ ಡಿಕ್ಷನರಿ ತಗೊಂಡು ಅರ್ಥ ಹುಡುಕಿದ್ರೂ ಆ ಯಾವ ಪದಗಳು ಈ ಬಾರಿ ಬಿಗ್ ಬಾಸ್ ಮನೆಗೆ ಹೋದ ಕೆಲವರನ್ನು ಸೆಲೆಬ್ರಿಟಿ ಎಂದು ಹೇಳಲ್ಲ!
ಯಾವ್ದುಕ್ಕೂ ಒಂದ್ಸಲ ನೀವೇ ಈ ಪಟ್ಟಿ ನೋಡ್ಬಿಡಿ…

1) ಹಾಸ್ಯ ಕಲಾವಿದ ಕುರಿಪ್ರತಾಪ್
2) ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟಿ ಪ್ರಿಯಾಂಕ
3) ಪತ್ರಕರ್ತ ರವಿಬೆಳಗೆರೆ
4) ರಾಜರಾಣಿ ಧಾರವಾಹಿಯ ಚುಕ್ಕಿ ಪಾತ್ರದ ನಟಿ ಚಂದನಾ ಅನಂತಕೃಷ್ಣ
5) ಸಂಗೀತ ನಿರ್ದೇಶಕ ವಾಸುಕಿ ವೈಭವ್.
6) ನಾಗಿಣಿ ಧಾರವಾಹಿ ಖ್ಯಾತಿಯ ದೀಪಿಕಾದಾಸ್
7) ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಜೈಜಗದೀಶ್
8) ಹಾವೇರಿ ಅಗಡಿ ಮಠದ ಗುರುಲಿಂಗಸ್ವಾಮಿ
9) ಕಿನ್ನರಿ ಧಾರವಾಹಿ ಖ್ಯಾತಿಯ ನಟಿ ಭೂಮಿ ಶೆಟ್ಟಿ
10) ಡ್ಯಾನ್ಸರ್ ಕಿಶನ್ ಬೆಳಗಲಿ
11) ನಟಿ ದುನಿಯಾ ರಶ್ಮಿ
12) ನಟ ಚಂದನ್ ಆಚಾರ್
13) ನಟಿ ಸುಜಾತಾ
14) ನಟ ರಾಜು ತಾಳಿಕೋಟೆ
15) ನಿರೂಪಕಿ ಚೈತ್ರವಾಸುದೇವ್
16) ನಟಿ, ಬರಹಗಾರ್ತಿ ಚೈತ್ರ ಕಟೂರ್
17) ನಟ ಶೈನ್ ಶೆಟ್ಟಿ
18) ನಟ ಹರೀಶ್ ರಾಜ್


ನೋಡಿದ್ರಲ್ಲಾ…ಇಲ್ಲಿ ಪ್ರತ್ಯೇಕವಾಗಿ ನಾವು ಅವರು ಸೆಲೆಬ್ರಿಟಿ ಇವರು ಅಲ್ಲ ಅಂತ ಹೇಳಲ್ಲ. ಯಾಕಂದ್ರೆ ಈ ಪಟ್ಟಿಯಲ್ಲಿರುವವರು ಎಷ್ಟು ಜನ ಬಹುತೇಕರಿಗೆ ಗೊತ್ತು? ಎಷ್ಟು ಮಂದಿ ಒಂದಿಷ್ಟು ಮಂದಿಗೆ ಮಾತ್ರ ಗೊತ್ತು? ಎಷ್ಟು ಸ್ಪರ್ಧಿಗಳು ಅಕ್ಕ-ಪಕ್ಕದ ಮನೆಯವರಿಗೂ ಗೊತ್ತಿಲ್ಲ ಅನ್ನೋದನ್ನು ಬಿಡಿಸಿ ಹೇಳ್ಬೇಕಾ?
10 ಮಂದಿ ಮೇಲ್ ಕಂಟೆಸ್ಟೆಂಟ್ ಗಳು 8 ಮಂದಿ ಫೀಮೇಲ್ ಕಂಟೆಸ್ಟೆಂಟ್ ಗಳು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಎಲ್ಲರನ್ನು ಸೆಲೆಬ್ರಿಟಿ ಕೆಟಗರಿಯಲ್ಲೇ ಮನೆಗೆ ಕಳುಹಿಸಿದ್ದಾರೆ! ಆದರೆ, ಈ ಸೆಲೆಬ್ರಿಟಿಗಳು ಎಷ್ಟೋ ಮಂದಿಗೆ ಇನ್ನೂ ಪರಿಚಯವೇ ಇಲ್ಲ! ಒಂದೋ ಎರಡ ಧಾರವಾಹಿಯಲ್ಲಿ ಕಾಣಿಸಿಕೊಂಡ ಮಟ್ಟಿಗೆ ಸೆಲೆಬ್ರಿಟಿ ಅಂತ ಕರೆದು ಬಿಗ್ ಬಾಸ್ ಗೆ ಕಳುಹಿಸಿದ್ರಾ ಏನೋ? ಕಾಮನ್ ಮ್ಯಾನ್ ಗಳನ್ನು ಕಳಿಸಿದ್ರೆ ಓಕೆ, ಎಲ್ಲರಿಗೂ ಪರಿಚಯ ಇರಲ್ಲ ಎನ್ನಬಹುದು. ಇವರು ಸೆಲೆಬ್ರಿಟಿಗಳು ಎಂದು ಕಳಿಸಿಕೊಟ್ಟು ಜನರಿಗೆ ‌ಪರಿಚಯವೇ ಇಲ್ದೆ ಇದ್ರೆ ಏನು?
ಇನ್ನು ಬಿಗ್ ಬಾಸ್ ಸೆಲೆಬ್ರಿಟಿ ಕಂಟೆಸ್ಟೆಂಟ್ ಗಳೆಂದು ಪರಿಗಣಿಸಲು ಇದ್ದ ಮಾನದಂಡ ಏನೆಂಬುದು ಆಶ್ಚರ್ಯ.
ಒಟ್ನಲ್ಲಿ ಬಿಗ್ ಬಾಸ್ ಮನೆ ಪ್ರವೇಶಿಸಿರುವವರ ಪೈಕಿ ಕೆಲವರು ಮಾತ್ರ ಇಡೀ ನಾಡಿನಲ್ಲಿ ಮನೆಮಾತಾಗಿರುವ ನಿಜವಾದ ಸೆಲೆಬ್ರಿಟಿಗಳು….ಇನ್ನು ಕೆಲವರು ಜನತೆಗೆ ಪರಿಚಯವಿಲ್ಲದ ತಾರೆಯರು…! ಆ ತಾರೆಯರು ಬಿಗ್ ಬಾಸ್ ನಲ್ಲಾದರೂ ಕಮಾಲ್ ಮಾಡಿ ಸೆಲೆಬ್ರಿಟಿಗಳಾಗಿ ಹೊರಬಂದು‌‌ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎನ್ನುವುದೇ ಆಶಯ..ಕೊ‌ನೆಯದಾಗಿ…ಕೇಳ್ಬೇಕಾಗಿರೋದು ಇಷ್ಟೇ ಬಿಗ್ ಬಾಸ್ ‘ ಏನ್ ಸ್ವಾಮಿ’ ಇದೆಲ್ಲಾ?

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...