ದರ್ಶನ್ ಕಾಲ್ಶೀಟ್ ಗಾಗಿ ಕಾಯುತ್ತಿದ್ದಾರೆ ಅಲ್ಲು ಅರ್ಜುನ್ ಚಿತ್ರದ ತೆಲುಗು ನಿರ್ದೇಶಕ.!

Must read

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವ ವರ್ಷವೂ ಸಹ ಖಾಲಿ ಇಲ್ಲ ಪ್ರತಿ ವರ್ಷದಿಂದ ವರ್ಷಕ್ಕೆ ದರ್ಶನ್ ಅವರ ಕಾಲ್ಶೀಟ್ ತುಂಬಾ ಬ್ಯುಸಿ ಆಗುತ್ತಲೇ ಇದೆ. ಹೌದು ಈ ವರ್ಷ ಯಜಮಾನ ಮತ್ತು ಕುರುಕ್ಷೇತ್ರ ಚಿತ್ರಗಳ ಮೂಲಕ ಡಬಲ್ ಬ್ಲಾಕ್ ಬಸ್ಟರ್ ಹಿಟ್ ನೀಡಿ ಸಕ್ಸಸ್ ಟ್ರ್ಯಾಕ್ಗೆ ಮರಳಿರುವ ಡಿ ಬಾಸ್ ಅವರು ಇದೀಗ ಒಡೆಯ ಮತ್ತು ರಾಬರ್ಟ್ ಎರಡು ಚಿತ್ರಗಳ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಇನ್ನು ಇದಲ್ಲದೆ ಇನ್ನೂ ಮುಂತಾದ ಹಲವಾರು ಪ್ರಾಜೆಕ್ಟ್ಗಳು ದರ್ಶನ್ ಅವರ ಕೈನಲ್ಲಿ ಇದ್ದು ಇದೀಗ ಮತ್ತೊಂದು ಬಿಗ್ ಪ್ರಾಜೆಕ್ಟ್ ನ ಜೊತೆ ದರ್ಶನ್ ಅವರ ಹೆಸರು ತಳುಕು ಹಾಕಿಕೊಂಡಿದೆ.

ಹೌದು ತೆಲುಗಿನಲ್ಲಿ ಅಲ್ಲು ಅರ್ಜುನ್ ನಟಿಸಿದ್ದ ನಾ ಪೇರು ಸೂರ್ಯ ನ ಇಲ್ಲು ಇಂಡಿಯಾ ಎಂಬ ಚಿತ್ರದ ನಿರ್ದೇಶಕ ವಕ್ಕಂತಮ್ ವಂಶಿ ಅವರು ದರ್ಶನ್ ಅವರಿಗೆ ಇದೀಗ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಾಗಿದ್ದಾರಂತೆ. ಹೌದು ಮೂಲಗಳ ಪ್ರಕಾರ ವಂಶಿ ಅವರು ದರ್ಶನ್ ಅವರಿಗೋಸ್ಕರ ಸ್ಪೆಷಲ್ ಕತೆಯೊಂದನ್ನು ರೆಡಿ ಮಾಡಿದ್ದು ಕನ್ನಡದಲ್ಲಿ ದರ್ಶನ್ ಅವರಿಗೆ ನಿರ್ದೇಶನ ಮಾಡಲಿದ್ದಾರಂತೆ. ಇನ್ನೂ ವಂಶಿ ಅವರು ಈ ಬಾರಿ ಕಂಪ್ಲೀಟ್ ಆಕ್ಷನ್ ಚಿತ್ರವನ್ನು ದರ್ಶನ್ ಅವರಿಗೆ ನಿರ್ದೇಶನ ಮಾಡಲಿದ್ದು ಬಿಗ್ ಬಜೆಟ್ನ ಚಿತ್ರ ಇದಾಗಲಿದೆ ಎಂಬ ಮಾತು ಕೇಳಿ ಬರುತ್ತಿವೆ.

- Advertisement -spot_img

More articles

- Advertisement -spot_img

Latest article