ಬಹದ್ದೂರ್ ಮತ್ತು ಭರ್ಜರಿ ಗಳಂತಹ ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಚಿತ್ರ ನೀಡಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಚೇತನ್ ಅವರ ನಿರ್ದೇಶನದ ಮೂರನೇ ಚಿತ್ರ ಭರಾಟೆ. ನಿರ್ದೇಶಕ ಚೇತನ್ ಅವರ ನಿರ್ದೇಶನದ ಚಿತ್ರಗಳೆಂದರೆ ಫ್ಯಾಮಿಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡುವಂತಹ ಚಿತ್ರಗಳಾಗಿರುತ್ತವೆ. ಹೀಗಾಗಿಯೇ ಚೇತನ್ ಅವರ ಚಿತ್ರದ ಮೇಲೆ ನಿರೀಕ್ಷೆ ಹುಟ್ಟುವುದು ಕಾಮನ್. ಇನ್ನು ಈ ಹಿಂದೆ ಧ್ರುವ ಸರ್ಜಾ ಅವರಿಗೆ ಮಾತ್ರ ನಿರ್ದೇಶನ ಮಾಡಿದ್ದ ಚೇತನ್ ಅವರು ಇದೀಗ ಶ್ರೀಮುರಳಿ ಅವರಿಗೆ ಭರಾಟೆ ನಿರ್ದೇಶನವನ್ನು ಮಾಡಿದ್ದಾರೆ.
ಇನ್ನು ಶಾಮಲಿ ಮತ್ತು ಚೇತನ್ ಜೋಡಿಯ ಭರಾಟೆ ಬಿಡುಗಡೆಗೂ ಮುನ್ನ ಮೋಡಿ ಮಾಡಿದ್ದು ಸುಮಾರು 30 ಕೋಟಿ ಬಿಜಿನೆಸ್ ಮಾಡಿದೆ ಎನ್ನಲಾಗುತ್ತಿದೆ. ಹೌದು ನಾಳೆ ಬಿಡುಗಡೆಯಾಗುತ್ತಿರುವ ಗಲಾಟೆ ಚಿತ್ರದ ವಿತರಣಾ ಹಕ್ಕು ಸುಮಾರು 17 ಕೋಟಿಗೆ ಸೇಲ್ ಆಗಿದೆ ಎನ್ನಲಾಗುತ್ತಿದ್ದು ಆಡಿಯೋ, ಸ್ಯಾಟಲೈಟ್ ಮತ್ತು ಅಮೆಜಾನ್ ಪ್ರೈಮ್ ರೈಟ್ಸ್ ಎಲ್ಲವೂ ಸೇರಿ 30 ಕೋಟಿ ಪ್ರಿ ರಿಲೀಸ್ ಬಿಸಿನೆಸ್ ಅನ್ನು ಭರಾಟೆ ಮಾಡಿದೆ ಎನ್ನಲಾಗುತ್ತಿದೆ.