ಮಾಸ್ಟರ್ ಕೊರೊನಾ ವೈರಸ್ ಹಾವಳಿಯ ನಂತರ ಬಿಡುಗಡೆಯಾದ ಮೊದಲ ಚಿತ್ರ. ಬಹುದೊಡ್ಡ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಮಾಸ್ಟರ್ ಚಿತ್ರ ಉತ್ತಮ ಕಲಕ್ಷನ್ ಕೂಡ ಮಾಡಿತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ಮಾಸ್ಟರ್ ಇದೀಗ ಮೊಬೈಲ್ ಗಳಲ್ಲಿಯೂ ಸಹ ಬರಲಿದೆ.
ಮುಂದಿನ ತಿಂಗಳು ಅಮೆಜಾನ್ ಪ್ರೈಮ್ ನಲ್ಲಿ ಮಾಸ್ಟರ್ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು ಆದರೆ ಇದೀಗ ಬಂದಿರುವ ಸುದ್ದಿ ಏನೆಂದರೆ ಇದೇ ತಿಂಗಳು ಮಾಸ್ಟರ್ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.
ಹೌದು ಇದೇ ತಿಂಗಳ 29ರಂದು ಮಾಸ್ಟರ್ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದೇ ತಿಂಗಳ 13 ರಂದು ಬಿಡುಗಡೆಯಾಗಿದ್ದ ಮಾಸ್ಟರ್ ಚಿತ್ರ ಇಷ್ಟು ಬೇಗ ಅಮೆಜಾನ್ ಪ್ರೈಮ್ ನಲ್ಲಿ ಬರುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಬಿಡುಗಡೆಯಾಗಿ ಇಪ್ಪತ್ತು ದಿನ ಕಳೆದಿಲ್ಲ ಇಷ್ಟು ಬೇಗ ಸಿನಿಮಾ ಬರ್ತಿದೆ ಇದಕ್ಕೆ ಯಾಕೆ ಚಿತ್ರಮಂದಿರದಲ್ಲಿ ನೋಡಬೇಕು ಎಂದು ಸಿನಿ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.