No menu items!
11.1 C
Munich
Wednesday, April 29, 2026

ಸಾರ್ವಜನಿಕರಿಗೆ ಕಲಾಪ ವೀಕ್ಷಣೆಗೆ ಅವಕಾಶವಿಲ್ಲ!

Must read

ನಾಳೆಯಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನೆಡೆಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು ನಾಳೆಯಿಂದ ವಿಧಾನ ಮಂಡಲ ಆದಿವೇಶನ ಶುರುವಾಗಲಿದೆ
ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲು ಆಹ್ವಾನಿಸಿ ಬಂದಿದ್ದೇನೆ
ಅಧಿವೇಶನದಲ್ಲಿ ಒಟ್ಟು 11 ವಿಧೇಯಕಗಳು ಇರಲಿದ್ದು ಅಂಗೀಕಾರವಾಗಬೇಕಿದೆ ಅವುಗಳಲ್ಲಿ ಮೂರು ಸುಗ್ರೀವಾಜ್ಞೆಗಳಿವೆ, ಅವುಗಳು ಅಂಗೀಕಾರ ಆಗಬೇಕು ಉಳಿದಂತೆ ಸರ್ಕಾರ, ಸಿಎಂ ಹಾಗೂ ಸಚಿವರಲ್ಲಿ ಮತ್ತೊಮ್ಮೆ ವಿನಂತಿ ಮಾಡಿಕೊಳ್ಳುತ್ತೇನೆ.

ಸದನದಲ್ಲಿ ವಿಧೇಯಕಗಳನ್ನು ಮಂಡಿಸುವ ಮೊದಲು ನಮಗೆ ಕಳಿಹಿಸಿ ಕೊಡಲು ವಿನಂತಿಸುತ್ತೇನೆ ಕಾನೂನು ಗಳನ್ನು ಮಾಡುವುದೇ ನಮ್ಮ ಕರ್ತವ್ಯವಾಗಿದೆ ಹೀಗಾಗಿ ಆದಷ್ಟು ಬೇಗನೆ ವಿಧೇಯಕಗಳನ್ನು ಒದಗಿಸಬೇಕು ಉಳಿದಂತೆ ಪ್ರಶ್ನೋತ್ತರ ಸೇರಿದಂತೆ ಎಲ್ಲವೂ ಇರಲಿದೆ
ಕೊರೊನಾ ವೈರಸ್ ಹಿನ್ನೆಯಲ್ಲಿ ಈ ಬಾರಿಯು ಮಾರ್ಗಸೂಚಿ ಪಾಲನೆ ಮಾಡಬೇಕು ಹಾಗು ಸಾರ್ವಜನಿಕರಿಗೆ ಈ ಬಾರಿಯೂ ಕಲಾಪ ವೀಕ್ಷಣೆಗೆ ಅವಕಾಶವಿಲ್ಲ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹಿಂದಿನ ಅಧಿವೇಶನ ನಡೆದಾಗ ಪಾಲನೆ ಮಾಡಿದಂತೆ ಈ ಬಾರಿಯೂ ಮಾಡಬೇಕು ಕೊರೊನಾ ವೈರಸ್ ಪರೀಕ್ಷೆ ಕಡ್ಡಾಯವಿಲ್ಲ
ಆದರೆ ಎಲ್ಲರೂ ಕೊರೊನಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು
ಯಾವುದಾದರೂ ಲಕ್ಷಣಗಳು ಕಂಡು ಬಂದಲ್ಲಿ ವಿಧಾನಸೌಧದ ವೈದ್ಯಕೀಯ ಸಿಬ್ಬಂದಿಯನ್ನು ಸಂಪರ್ಕಿಸಬೇಕು ಅಗತ್ಯ ಬಿದ್ದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸುದ್ದಿಗೋಷ್ಠಿ ಯಲ್ಲಿ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article