ಬಿಯರ್ ಕುಡಿದ್ರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಾ? ಇಲ್ಲಿದೆ Perfect Answer!

Date:

ಬಿಯರ್ ಕುಡಿದ್ರೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಾ? ಇಲ್ಲಿದೆ Perfect Answer!

ಬೀಯರ್​, ಮಾನವ ಬದುಕಿನೊಂದಿಗೆ ಒಂದು ನಂಟನ್ನು ಬಹಳಷ್ಟು ವರ್ಷಗಳಿಂದ ತಳಕು ಹಾಕಿಕೊಂಡು ಬಂದಿದೆ. ಎಂದೂ ಕುಡಿಯದ ಫ್ರೆಂಡ್​ಗೆ, ಬೀಯರ್​ಗೆ ಏನು ಆಗಲ್ಲ ಮಗ ತಗೋ ಅಂತ ಹೇಳಿ ಅವನನ್ನು ಸುರಲೋಕದ ತಂಡಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತವೆ. ಇನ್ನು ಆರೋಗ್ಯದ ವಿಷಯಕ್ಕೆ ಬಂದಾಗ ಬೀಯರ್ ಹಲವು ಬಾರಿ ಚರ್ಚೆಯ ಮುನ್ನೆಲೆಗೆ ಬರುತ್ತೆ.

ಹೌದು,ಮದ್ಯ ಇಲ್ಲದೆ ಯಾವುದೇ ಪಾರ್ಟಿ ಪೂರ್ಣಗೊಳ್ಳುವುದಿಲ್ಲ… ಅದರಲ್ಲೂ ನಿಜವಾದ ಬಿಯರ್‌ ಇಲ್ಲವಾದರೇ ಪಾರ್ಟಿಗೆ ಕಳೆನೇ ಇರಲ್ಲ ಎಂಬ ಭಾವನೆ ಜನರ ಮಧ್ಯೆಯೇ ನಾವು ಬದುಕುತ್ತಿದ್ದೇವೆ. ಆದರೆ ದೀರ್ಘಕಾಲದ ಕಾಯಿಲೆಗಳ ಬಗ್ಗೆ ಗಮನ ಹರಿಸದೆ ಪಾರ್ಟಿಗಳಲ್ಲಿ ತೊಡಗಿಸಿಕೊಂಡರೆ ನಿಮ್ಮ ಆರೋಗ್ಯವು ಹದಗೆಡುವುದು ಖಚಿತ.

ಆಲ್ಕೋಹಾಲ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ಎಲ್ಲರಿಗೂ ತಿಳಿದಿದೆ. ಇದು ಯಕೃತ್ತು, ನಿದ್ರೆ ಮತ್ತು ತೂಕದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳಲ್ಲಿ ಆಲ್ಕೋಹಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಯಾವುದೋ ಸಂದರ್ಭದಲ್ಲಿ ಒಂದು ಅಥವಾ ಎರಡು ಪೆಗ್ ತೆಗೆದುಕೊಂಡರೇ ಅದು ದೊಡ್ಡ ವಿಷಯವಲ್ಲ ಎನ್ನುವ ಮನಸ್ಥಿತಿಯವರೂ ಇದ್ದಾರೆ.. ಆದರೆ ಒಂದು ಹನಿ ಆಲ್ಕೋಹಾಲ್ ಕೂಡ ಅಪಾಯಕಾರಿ.

ಪೌಷ್ಟಿಕತಜ್ಞರ ಪ್ರಕಾರ, ನಾವು ಆಲ್ಕೊಹಾಲ್ ಸೇವಿಸಿದಾಗ, ನಮ್ಮ ದೇಹವು ಅದನ್ನು ವಿಷ ಎಂದು ಗುರುತಿಸುತ್ತದೆ. ಅದಕ್ಕಾಗಿಯೇ ದೇಹವು ಇತರ ಚಟುವಟಿಕೆಗಳಿಗಿಂತ ಆಲ್ಕೋಹಾಲ್ ಸೇವಿಸಿದಾಗ ನಡೆದುಕೊಳ್ಳುವ ರೀತಿಯೇ ಬೇರೆ ಇರುತ್ತದೆ.. ಇದು ಕರುಳಿನಲ್ಲಿ ಪ್ರವೇಶಿಸಿದ ತಕ್ಷಣ, ಚಯಾಪಚಯವು ತೊಂದರೆಗೊಳಗಾಗುತ್ತದೆ.

ಇದಲ್ಲದೇ ಆಲ್ಕೋಹಾಲ್ನೊಂದಿಗೆ ಕಾಕ್ಟೇಲ್ಗಳು ಅಥವಾ ಸಕ್ಕರೆ ಮಿಕ್ಸರ್ಗಳನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇನ್ನಷ್ಟು ಹೆಚ್ಚಿಸಬಹುದು. ಆಲ್ಕೋಹಾಲ್ ಆರೋಗ್ಯಕ್ಕೆ ಸುರಕ್ಷಿತವಲ್ಲ. WHO, ಲ್ಯಾನ್ಸೆಟ್ ಬಿಡುಗಡೆ ಮಾಡಿದ 2023 ರ ವರದಿಯ ಪ್ರಕಾರ.. ಯಕೃತ್ತು, ಸಿರೋಸಿಸ್, ಹೃದ್ರೋಗ ಮತ್ತು ಇತರ ಸಾಂಕ್ರಾಮಿಕವಲ್ಲದ ಕಾಯಿಲೆಗಳಂತಹ ವಿವಿಧ ಕಾಯಿಲೆಗಳಿಗೆ ಆಲ್ಕೋಹಾಲ್ ಪ್ರಮುಖ ಕಾರಣವಾಗಿದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು...

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು: ಸಚಿವ ಮಧು ಬಂಗಾರಪ್ಪ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು:...

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ?

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ? ಬೆಲೆ ಏರಲಿ,...

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು ನಿಂಬೆಹಣ್ಣು ನಮ್ಮ...