ಬಿಳಿ ಕೂದಲಿನಿಂದ ಮುಜುಗರ ಆಗ್ತಿದ್ಯಾ!? ಹಾಗಿದ್ರೆ ನಿಂಬೆರಸಕ್ಕೆ ಈ ಎಣ್ಣೆ ಬೆರೆಸಿ, ರಿಸಲ್ಟ್ ಗ್ಯಾರಂಟಿ!
ಪ್ರಸ್ತುತ, ಜನರ ಕೆಟ್ಟ ಆಹಾರ ಪದ್ಧತಿಗಳು ದೇಹದ ಭಾಗಗಳನ್ನು ದುರ್ಬಲಗೊಳಿಸುತ್ತವೆ. ಈ ಆಹಾರವು ಜೀರ್ಣಿಸಿಕೊಳ್ಳಲು ಕಷ್ಟವಾಗುವುದು ಮಾತ್ರವಲ್ಲದೆ ನಮ್ಮ ಯಕೃತ್ತನ್ನು ಹಾನಿಗೊಳಿಸುತ್ತದೆ. ಆಲಿವ್ ಎಣ್ಣೆ ಮತ್ತು ನಿಂಬೆಯನ್ನು ಸೇವಿಸುವುದರಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆಯು ಆರೋಗ್ಯಕರವಾಗಿರುತ್ತದೆ.
ಇಂದಿನ ಬ್ಯುಸಿ ಲೈಫ್ʼನಲ್ಲಿ ಅನೇಕ ಜನರು ಬೊಜ್ಜು ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುವುದನ್ನು ನೋಡಿರಬೇಕು. ಆಲಿವ್ ಎಣ್ಣೆ ಮತ್ತು ನಿಂಬೆ ಕೂಡ ಇವುಗಳಿಂದ ನಮಗೆ ರಕ್ಷಣೆ ನೀಡುತ್ತದೆ.
ಆಲಿವ್ ಎಣ್ಣೆ ಮತ್ತು ನಿಂಬೆಯ ಸೇವನೆಯು ಚರ್ಮವನ್ನು ಸುಧಾರಿಸುತ್ತದೆ. ಜೊತೆಗೆ ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳು ಸಹ ಕ್ರಮೇಣ ಕಡಿಮೆಯಾಗುತ್ತದೆ. ಇನ್ನು ಈ ಪರಿಹಾರ ಮಾಡುವವರು ಮದ್ಯಪಾನ, ಧೂಮಪಾನ ಮತ್ತು ಜಂಕ್ ಫುಡ್ʼಗಳಿಂದ ದೂರವಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಬಿಳಿ ಕೂದಲಿನ ಸಮಸ್ಯೆಗೂ ಇದು ಬೆಸ್ಟ್ ಪರಿಹಾರವಾಗಿದ್ದು ನಿಂಬೆ ರಸದ ಜೊತೆ ಬೆರೆಸಿ ಮಸಾಜ್ ಮಾಡಿದರೆ ಉತ್ತಮ. ಇದರಿಂದಾಗಿ ನೆತ್ತಿಯಲ್ಲಿ ರಕ್ತಪರಿಚಲನೆ ಹೆಚ್ಚಾಗುತ್ತದೆ. ನೆತ್ತಿ ಮತ್ತು ಕೂದಲಿಗೆ ಇದರಿಂದ ಮಸಾಜ್ ಮಾಡಿ ಅರ್ಧ ಘಂಟೆಯ ನಂತರ ತೊಳೆಯಿರಿ. ಕೂದಲು ಬಿಳಿಯಾಗುವುದಕ್ಕೆ ಪರಿಣಾಮಕಾರಿ ಪರಿಹಾರ ಇದಾಗಿದೆ.