“ಬೆಂಗಳೂರು ಏರ್ ಶೋ ನಲ್ಲಿ ಕನ್ನಡಕ್ಕೆ ಅವಮಾನ”

0
60

ಹದಿಮೂರನೇ ಏರ್ ಶೋ ಗೆ ನಿನ್ನೆಯಷ್ಟೇ ತೆರೆ ಬಿದ್ದಿದೆ. ಕೊರೋನಾವೈರಸ್ ನಡುವೆಯೂ ಅತ್ಯುತ್ತಮವಾಗಿ ಈ ಬಾರಿಯ ಏರ್ ಶೋ ಕಾರ್ಯಕ್ರಮ ನೆರವೇರಿದೆ. ಈ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ , ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಹ ಆಗಮಿಸಿದ್ದರು.

 

 

ಇನ್ನೂ ಉಡುಪಿಯಲ್ಲಿ ಇಂದು ಮಾತನಾಡಿದ ಕರವೇ ಪ್ರವೀಣ್ ಶೆಟ್ಟಿ ಅವರು ಏರ್ ಶೋ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋ ನಲ್ಲಿ ಎಲ್ಲಾ ಹಿಂದಿ ಮಯವಾಗಿತ್ತು ಕನ್ನಡಕ್ಕೆ ಜಾಗವೇ ಇರಲಿಲ್ಲ ಇದು ಕನ್ನಡದ ಕಗ್ಗೊಲೆ , ಕನ್ನಡಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

 

ಅಷ್ಟೇ ಅಲ್ಲದೆ ಶಿವಮೊಗ್ಗಕ್ಕೆ ಅಮೀತ್ ಷಾ ಅವರು ಆಗಮಿಸಿದ್ದಾಗಲೂ ಸಹ ಕನ್ನಡವನ್ನು ಬಳಸಿರಲಿಲ್ಲ ಬದಲಾಗಿ ಹಿಂದಿಯನ್ನು ಬಳಸಲಾಗಿತ್ತು , ರಾಜಕಾರಣಿಗಳೆಲ್ಲ ಇಲ್ಲಿ ಬಂದ ಮೇಲೆ ಕನ್ನಡವನ್ನೇ ಬಳಸಬೇಕು ಎಂದು ಪ್ರವೀಣ್ ಶೆಟ್ಟಿ ಅವರು ಆಗ್ರಹಿಸಿದರು. ಮಹಾರಾಷ್ಟ್ರಕ್ಕೆ ಕೇಂದ್ರದ ರಾಜಕಾರಣಿಗಳು ತೆರಳಿದರೆ ಅಲ್ಲಿ ಮರಾಠಿಯಲ್ಲಿಯೇ ಎಲ್ಲವೂ ಇರುತ್ತದೆ ಆದರೆ ಇಲ್ಲಿ ಮಾತ್ರ ಕನ್ನಡವಿಲ್ಲ ಬರೀ ಹಿಂದಿಯಲ್ಲಿ ಬೋರ್ಡ್ ಗಳು ಇದ್ದವು ಎಂದು ಪ್ರವೀಣ್ ಶೆಟ್ಟಿ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದರು.

LEAVE A REPLY

Please enter your comment!
Please enter your name here