ವಿನಯ್ ರಾಜ್ಕುಮಾರ್ ಗೆ ಜೋಡಿಯಾದ ಅದಿತಿ ಪ್ರಭುದೇವ.

Must read

ಸಿದ್ಧಾರ್ಥ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಿನಯ್ ರಾಜ್ ಕುಮಾರ್ ಅವರು ತುಂಬಾ ವಿಭಿನ್ನವಾದ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರನ್ ಆ್ಯಂಟನಿ ಮತ್ತು ಅನಂತು ವರ್ಸಸ್ ನುಸ್ರತ್ ಚಿತ್ರಗಳಲ್ಲಿ ಅಭಿನಯಿಸಿದ್ದ ವಿನಯ್ ರಾಜ್ ಕುಮಾರ್ ಅವರ ಗ್ರಾಮಾಯಣ ಚಿತ್ರದ ಚಿತ್ರೀಕರಣ ಮುಗಿಸಿದ್ದು ಬಿಡುಗಡೆ ಆಗಬೇಕಿದೆ.

 

 

ಇನ್ನೂ ಇದೀಗ ವಿನಯ್ ರಾಜ್ ಕುಮಾರ್ ಅವರ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೌದು ವಿನಯ್ ರಾಜ್ ಕುಮಾರ್ ಅವರ ಮುಂದಿನ ಚಿತ್ರ ‘ಅಂದೊಂದಿತ್ತು ಕಾಲ’ ದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಈ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅವರು ಅಭಿನಯಿಸಲಿದ್ದಾರೆ.

 

ಪುಟ್ಟ ಮಗುವೊಂದು ಗಾಳಿಪಟ ಹಾರಿಸುತ್ತಿರುವಾಗ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ವಿನಯ್ ರಾಜ್ ಕುಮಾರ್ & ಅದಿತಿ ಪ್ರಭುದೇವ ಅವರ ಲುಕ್ ಅನ್ನು ಬಿಟ್ಟುಕೊಟ್ಟಿಲ್ಲ..

- Advertisement -spot_img

More articles

- Advertisement -spot_img

Latest article