ಬೇವಿನ ಎಲೆಯ ಆರೋಗ್ಯ ಲಾಭ ತಿಳಿದ್ರೆ ಸ್ನಾನಕ್ಕೆ ಸಾಬೂನ್ ಬಳಕೆಯನ್ನೇ ಮರೆತು ಬೀಡ್ತೀರಾ!
ಬೇಸಿಗೆಯಲ್ಲಿ ತಂಪು ಪಾನೀಯ ಅಥವಾ ಜೂಸ್ ಕುಡಿಯಬೇಕೆಂದನಿಸುತ್ತದೆ. ಅಲ್ಲದೆ ಪದೇ ಪದೇ ಸ್ನಾನ ಮಾಡಬೇಕೆಂದನಿಸುತ್ತದೆ. ದೇಹದಲ್ಲಿ ಜಲಸಂಚಯನ ಕಾಪಾಡಿಕೊಳ್ಳಲು ಹೆಚ್ಚಿನ ದ್ರವಾಹಾರ ಸೇವಿಸುವ ಅಗತ್ಯವಿರುತ್ತದೆ. ಅಲ್ಲದೆ ವಿಪರೀತ ಬಾಯಾರಿಕೆಯೂ ಆಗುತ್ತದೆ. ನೀರು, ಹಣ್ಣುಗಳ ಸೇವನೆ ದೇಹದಲ್ಲಿ ಜಲಸಂಚಯವನ್ನು ಕಾಪಾಡುತ್ತದೆ. ಬೇಸಿಗೆಯಲ್ಲಿ ಸ್ನಾನ ಮಾಡುವಾಗ, ನೀರಿಗೆ ಕೆಲವು ಬೇವಿನ ಎಲೆಗಳನ್ನು ಸೇರಿಸಿ. ಕೆಲವು ಗಂಟೆಗಳ ನಂತರ ನೀವು ಈ ನೀರಿನಿಂದ ಸ್ನಾನ ಮಾಡಬಹುದು.
ಹೌದು ಬೇವಿನ ಎಲೆಗಳನ್ನು ತ್ವಚೆಯ ಆರೋಗ್ಯಕ್ಕೆ ಹೇಗೆ ಬಳಸಬಹುದು ಮತ್ತು ಇದರ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಚರ್ಮ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ
ಮುಖ್ಯವಾಗಿ ನಮ್ಮ ಮುಖದ ಮೇಲೆ ಉಂಟಾಗುವ ಮೊಡವೆಗಳು, ಗುಳ್ಳೆಗಳು ಸಣ್ಣ ಪುಟ್ಟ ಗಾಯಗಳ ಕಲೆಗಳು ಮತ್ತು ಬ್ಲಾಕ್ಹೆಡ್ ಗಳ ನಿವಾರಣೆ ಬೇವಿನಿಂದ ಆಗುತ್ತದೆ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಕಂಡು ಬರುವ ಚರ್ಮದ ಇಂತಹ ಸಮಸ್ಯೆಗಳು ಮತ್ತು ಚರ್ಮದ ಅಲರ್ಜಿ ಪರಿಹಾರಕ್ಕೆ ಬೇವಿನ ನೀರಿನ ಸ್ನಾನ ಸಹಾಯ ಮಾಡುತ್ತದೆ.
ಬೇವಿನಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು, ಆಂಟಿ – ಮೈಕ್ರೋಬಿಯಲ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳು ಹೆಚ್ಚಾಗಿರುವುದರಿಂದ ಚರ್ಮದ ಸಮಸ್ಯೆಗಳಾದ ಸೋರಿಯಾಸಿಸ್, ಸಿಡುಬು ಮತ್ತು ಇಸುಬು ರೀತಿಯ ಸಮಸ್ಯೆಗಳು ಕ್ರಮೇಣವಾಗಿ ಇಲ್ಲವಾಗುತ್ತವೆ.
ಸಿಡುಬು ಸಮಸ್ಯೆ ಇರುವವರಿಗೆ
ಸಿಡುಬು ಸಮಸ್ಯೆಯಿಂದ ಬಳಲುತ್ತಿರುವ ಜನರು ತಾವು ತೆಗೆದುಕೊಳ್ಳುತ್ತಿರುವ ಔಷಧಿಯ ಜೊತೆಗೆ ಪ್ರತಿ ದಿನ ಬೇವಿನ ಎಲೆಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ಸಿಡುಬಿನ ಸಮಸ್ಯೆ ಬಹಳ ಬೇಗನೆ ನಿವಾರಣೆಯಾಗುತ್ತದೆ.
ಬಹಳ ಜನರಿಗೆ ದೇಹದಲ್ಲಿ ಬೆವರಿನಿಂದ ದುರ್ವಾಸನೆ ಹೆಚ್ಚಾಗಿರುತ್ತದೆ. ಪಕ್ಕದಲ್ಲಿ ಕೂತುಕೊಳ್ಳಲು, ನಿಂತುಕೊಳ್ಳಲು ಅಥವಾ ಅವರ ಬಳಿ ಮಾತನಾಡಲು ಸಾಧ್ಯವೇ ಆಗುವುದಿಲ್ಲ. ಅಂತಹವರು ಬೇವಿನ ನೀರಿನ ಸ್ನಾನ ಮಾಡುವ ಅಭ್ಯಾಸ ಮಾಡಿ ಕೊಳ್ಳಬಹುದು. ಕೇವಲ ಬೆವರಿನ ದುರ್ವಾಸನೆ ದೂರವಾಗುವುದು ಮಾತ್ರವಲ್ಲದೆ ಎಣ್ಣೆಯ ಚರ್ಮ ಹೊಂದಿದ ಹಲವರಿಗೆ ಇದರಿಂದ ಪ್ರಯೋಜನಗಳು ಉಂಟಾಗುತ್ತದೆ.
ತಲೆಹೊಟ್ಟು
• ಇನ್ನು ತಲೆಯಲ್ಲಿ ಹೆಚ್ಚಾಗಿ ತಲೆ ಹೊಟ್ಟು ಮತ್ತು ನೆತ್ತಿಯ ಕೆರೆತ ಹೊಂದಿರುವವರು ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಅದಕ್ಕೆ ಪರಿಹಾರವನ್ನು ಕಾಣಬಹುದು.
• ಇಷ್ಟೇ ಅಲ್ಲದೆ ಕೂದಲು ತುಂಬಾ ಹೊಳಪಿನಿಂದ ಕೊಡಿ, ಕೂದಲಿನ ಕಿರುಚೀಲಗಳು ಬಲಗೊಂಡು ತಲೆಯ ಹಾಗೂ ನೆತ್ತಿಯ ಭಾಗದಲ್ಲಿ ಯಾವುದೇ ಉರಿಯೂತ ಮತ್ತು ಸೋಂಕು ಉಂಟಾಗದಂತೆ ಕಾಪಾಡಿಕೊಳ್ಳಬಹುದು.
• ಕಣ್ಣಿನ ಭಾಗದಲ್ಲಿ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಬೇವಿನ ನೀರಿನಿಂದ ತಲೆ ಸ್ನಾನ ಮಾಡಿದರೆ, ಕಣ್ಣುಗಳ ನರಗಳ ಆರೋಗ್ಯ ವೃದ್ಧಿಗೊಂಡು ಪರಿಹಾರ ಕಾಣಬಹುದು.
• ಮನೆಯ ಹೊರಗಡೆ ಕಷ್ಟ ಪಟ್ಟು ಜಮೀನುಗಳಲ್ಲಿ ಕೆಲಸ ಮಾಡುವವರು ಅಥವಾ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಹೆಚ್ಚು ಆಯಾಸದಿಂದ ಬಳಲಿ ಬಂದು ಸಂಜೆಯ ಸಮಯದಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಬೇವಿನ ಎಲೆಗಳ ಪೇಸ್ಟ್ ಹಾಕಿ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡರೆ ತಮ್ಮ ದೇಹದ ಆಯಾಸ ದೂರವಾಗಿ ಕಣ್ಣುಗಳಿಗೆ ಒಳ್ಳೆ ನಿದ್ರೆ ಆವರಿಸುತ್ತದೆ.