ಬೈರತಿಯ ನಿವಾಸದಿಂದ ಹೊರಗೆ ಬರುತ್ತಿದ್ದಾಗ ಯುವಕನೊಬ್ಬ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ, ತಮಗೆ ಪರಿಚಯವಿರುವ ಹುಡುಗನೇ ಈ ಕೃತ್ಯಕ್ಕೆ ಮುಂದಾಗಿರುವುದು ಆಶ್ಚರ್ಯ ತಂದಿದೆ. ನಮ್ಮ ಗನ್‍ಮ್ಯಾನ್‍ಗಳ ಸಹಾಯದಿಂದ ಅಪಾಯದಿಂದ ಪಾರಾಗಿದ್ದೇನೆಂದು ಸುರೇಶ್ ತಿಳಿಸಿದ್ದಾರೆ.ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ .

ಕಳೆದ ಎರಡು-ಮೂರು ದಿನಗಳಿಂದ ನಮಗೆ ಪರಿಚಯವಿರುವ ಶಿವು ಎಂಬ ಹುಡುಗ ಮನೆ ಸುತ್ತಮುತ್ತ ಅಡ್ಡಾಡುತ್ತಿದ್ದನೆಂದು ನಮ್ಮ ಸೆಕ್ಯೂರಿಟಿ ತಿಳಿಸಿದ್ದಾರೆ. ಆದರೆ ಯಾವ ಕಾರಣಕ್ಕೆ ಹೀಗೆ ಮಾಡಿದ್ದಾನೆಂದು ಗೊತ್ತಾಗ್ತಿಲ್ಲ ಎಂದು ಹೇಳಿದರು.ಕೊತ್ತನೂರು ಠಾಣೆ ಪೊಲೀಸರು ಆರೋಪಿ ಶಿವುನನ್ನು ವಶಕ್ಕೆ ಪಡೆದಿದ್ದಾರೆ.






