ಕಳೆದ ಶನಿವಾರ ಭಾರತ ತನ್ನ ಹೊಸ ಅಪ್ಡೇಟೆಡ್ ಮ್ಯಾಪ್ ಅನ್ನು ಬಿಡುಗಡೆ ಮಾಡಿತ್ತು. ಹೌದು ಲಡಾಕ್ ಜಮ್ಮು ಕಾಶ್ಮೀರ ವಿಭಜನೆಯಾದ ನಂತರ ಈ ಒಂದು ಮ್ಯಾಪ್ ಅನ್ನು ಭಾರತ ಬಿಡುಗಡೆಗೊಳಿಸಿದೆ. ಲಡಾಕ್ & ಜಮ್ಮು ಕಾಶ್ಮೀರ ಗಳನ್ನು ಬೇರೆ ಬೇರೆ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಗೊಳಿಸಿದ ನಂತರ ಈ ಮ್ಯಾಪ್ ಸಂಪೂರ್ಣ ಬದಲಾಗಿದ್ದು ಹಳೆ ಮ್ಯಾಪ್ ಗಿಂತ ಭಿನ್ನ ವಿಭಿನ್ನವಾಗಿ ಇದೆ.
ಈ ಮ್ಯಾಪ್ ನಲ್ಲಿ ಜಮ್ಮು ಕಾಶ್ಮೀರದ ಎಲ್ಲ ಭಾಗವನ್ನು ಭಾರತಕ್ಕೆ ಸೇರಿಸಿಕೊಳ್ಳಲಾಗಿದ್ದು ಪಾಕ್ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದೆ ಪಾಕ್ ನನ್ನದು ಎಂದು ಹೇಳಿಕೊಳ್ಳುತ್ತಿದ್ದ ಜಾಗವನ್ನು ಸೇರಿಸಿ ಭಾರತ ದೇಶ ಎಂದು ಮ್ಯಾಪ್ ಮುಖಾಂತರ ಚಿತ್ರಿಸಲಾಗಿದ್ದು ಪಾಕಿಸ್ತಾನದ ನಿದ್ದೆಗೆಟ್ಟಿದೆ. ಒಟ್ಟಿನಲ್ಲಿ ಹೊಸ ಅಕ್ಕಿಯಿಂದ ಅರಳಿದ ಪ್ರದೇಶವನ್ನು ನಿರ್ಮಿಸಿದ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ಈ ಮೂಲಕ ಮತ್ತೊಂದು ದೊಡ್ಡ ಹೊಡೆತವನ್ನು ಕೊಟ್ಟಿದೆ.