ಭಾರತ ರತ್ನ ಪ್ರಶಸ್ತಿ ಘೋಷಣೆ.. ಈ ಬಾರಿಯು ಸಿಗಲಿಲ್ಲ ನಡೆದಾಡುವ ದೇವರಿಗೆ ಭಾರತ ರತ್ನ..!!
ಕಳೆದ ಕೆಲ ದಿನಗಳ ಹಿಂದಷ್ಟೇ ಶ್ರೀ ಶಿವಕುಮಾರ ಸ್ವಾಮಿಗಳು ನಮ್ಮನ್ನ ಅಗಲಿದ್ದಾರೆ.. ಈ ಹಿಂದೆಯೇ ಅವರ ನಿಸ್ವಾರ್ಥ ಸೇವೆಯನ್ನ ಕಂಡು ತ್ರಿವಿಧ ದಾಸೋಹಿಗೆ ಭಾರತರತ್ನ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು.. ಇದಕ್ಕೆ ಇಡೀ ಕರುನಾಡೆ ದನಿಗೂಡಿಸಿತ್ತು.. ಶ್ರೀಗಳು ಕಾಲವಾದ ಬಳಿಕ ಮಾತನಾಡಿದ ರಾಜಕೀಯ ಮುಖಂಡರು ಕೂಡ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ರು.. ಆದರೆ ಇದ್ಯಾವುದಕ್ಕು ಬೆಲೆ ಇಲ್ಲದಂತಾಗಿದೆ.. ಯಾಕಂದ್ರೆ ಈ ಬಾರಿಯ ಭಾರತ ರತ್ನ ಪ್ರಶಸ್ತಿ ಪ್ರಕಟಗೊಂಡಿದ್ದು ಶ್ರೀಗಳ ಹೆಸರೆ ಇಲ್ಲದಂತಾಗಿದೆ..
ಗಣರಾಜ್ಯೋತ್ಸವ ಅಂಗವಾಗಿ ದೇಶದ ಮೂವರು ಗಣ್ಯರಿಗೆ ಭಾರತ ರತ್ನವನ್ನ ಘೋಷಣೆ ಮಾಡಿದೆ.. ಮಾಜಿ ರಾಷ್ಟಪತಿ ಪ್ರಣಬ್ ಮುಖರ್ಜಿ, ಜನಸಂಘದ ನಾಯಕ ನಾನಾಜಿ ದೇಶ್ ಮುಖ್(ಮರಣೋತ್ತರ) ಹಿರಿಯ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ.. ಈ ಮೂಲಕ ಕರುನಾಡಿನ ಶ್ರೀಗಳ ಭಾರತ ರತ್ನ ಆಸೆ ಹುಸಿಯಾಗಿದೆ.. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಭಾರತ ರತ್ನ ಪಡೆದವರ ಹೆಸರುಗಳನ್ನ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ..
ಸದ್ಯ ಈ ನಿರ್ಧಾರಕ್ಕೆ ಕರುನಾಡಿನಲ್ಲಿ ತೀರ್ವ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ..