ಭ್ರಷ್ಟಾಚಾರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

0
399

ಬೆಂಗಳೂರು:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಹೆಬ್ಬಾಳ್ಕರ್ ವಿರುದ್ಧ 600 ಕೋಟಿಗೂ ಹೆಚ್ಚು ಮೌಲ್ಯದ ಭ್ರಷ್ಟಾಚಾರದ ಆರೋಪ ಮಾಡಲಾಗಿದ್ದು, ಮಕ್ಕಳ ಪೌಷ್ಠಿಕ ಆಹಾರ ಸರಬರಾಜಿನಲ್ಲಿ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅನರ್ಹಗೊಂಡಿರುವ ಸಹಕಾರ ಸಂಸ್ಥೆಗಳಿಂದ ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡುವ ಟೆಂಡರ್ ನೀಡಿದ ಆರೋಪವನ್ನು ಸಚಿವರ ವಿರುದ್ಧ ಮಾಡಲಾಗಿದೆ. ಬ್ಲ್ಯಾಕ್ ಲಿಸ್ಟ್ನಲ್ಲಿರುವ ಕ್ರಿಸ್ಟಿ ಫ್ರೈಡ್ ಗ್ರಾಮ್ ಕಂಪನಿ ಜೊತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇಲಾಖೆ ಅಧಿಕಾರಿಗಳು ಶಾಮೀಲು ಆರೋಪ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತಾಗೆ ವಕೀಲ ನಟರಾಜ ಶರ್ಮಾ ದೂರು ನೀಡಿದ್ದಾರೆ

ಗುತ್ತಿಗೆದಾರರಿಂದ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಗುಣಮಟ್ಟ ಇರುವುದಿಲ್ಲ. ಹೀಗಾಗಿ ಸ್ಥಳೀಯ ಸಂಘಗಳೇ ಆಹಾರ ಪೂರೈಕೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಆದೇಶ ಉಲ್ಲಂಘನೆ ಮಾಡಿ ಬ್ಲಾಕ್ ಲಿಸ್ಟ್ ನಲ್ಲಿರುವ ಕಂಪನಿಗೆ ಟೆಂಡರ್ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಜೆ.ಸಿ ಪ್ರಕಾಶ್ ಹಾಗೂ ನಿರ್ದೇಶಕರ ವಿರುದ್ಧ ದೂರು ನೀಡಲಾಗಿದೆ. ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ, ಒಂದು ವರ್ಷಕ್ಕೆ ಎರಡು ಸಾವಿರ ಕೋಟಿ ರೂಪಾಯಿಯಂತೆ,
ಮೂವರು ವರ್ಷಕ್ಕೆ ಆರು ಸಾವಿರ ಕೋಟಿ ರೂಪಾಯಿ ಆಗುತ್ತೆ. ಇದರಲ್ಲಿ ಶೇಕಡಾ 10 ರಷ್ಟು ಕಮಿಷನ್ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಮಾನ್ಯ ಮಂತ್ರಿಗಳು, ಅಧಿಕಾರಿ ಹಾಗೂ ನಿರ್ದೇಶಕರಿಗೆ ಈ ಹಣ ಕೊಟ್ಟಿದ್ದಾರೆ, 10 ಪರ್ಸೆಂಟ್ ಎಂದರೇ 600 ಕೋಟಿ ರೂಪಾಯಿ ಆಗುತ್ತೆ. ಈ ಕಂಪನಿಗಳು ಎಲ್ಲಿ ಇದೆ ಅಂತ ತಿಳಿದುಕೊಳ್ಳಲು ಮುಂದಾದರೆ ಇವರು ನೀಡಿರುವ ಕಂಪನಿಗಳಿಗೆ ಯಾವುದೇ ರೀತಿಯ ಕಂಪನಿಯೂ ಬಿಐಎಸ್ ಸರ್ಟಿಫಿಕೇಟ್ ಇರುವ ಸಂಸ್ಥೆ ಇರಲಿಲ್ಲ. ಈ ದಾಖಲೆಗಳನ್ನು ಲೋಕಾಯುಕ್ತ ಸಂಸ್ಥೆಗೆ ನೀಡಿದ್ದೇವೆ. ಎಸಿಬಿ ಮುಚ್ಚಲು ನಾವು ಹೋರಾಟ ಮಾಡಿ, ಲೋಕಾಯುಕ್ತ ಪರ ಹೋರಾಟ ಮಾಡಿದ್ದೇವು. ಈಗ ಲೋಕಾಯುಕ್ತ ರಾಜ್ಯದ ಜನರಿಗೆ ನ್ಯಾಯ ನೀಡಬೇಕು ಎಂದು ಮನವಿ ಮಾಡಿದರು