120 ದಿನಗಳ ಕಾಲ ನಡೆದ ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿ ಕಳೆದ ಭಾನುವಾರದಂದು ಅಂತ್ಯಗೊಂಡಿದೆ. ಕೊನೆಯ ಗಳಿಗೆಯಲ್ಲಿ ಯಾವ ಸ್ಪರ್ಧಿ ಗೆಲ್ಲಲಿದ್ದಾರೆ ಎಂದು ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದ ಬಿಗ್ ಬಾಸ್ 8ನೇ ಸೀಸನ್ ಕಾರ್ಯಕ್ರಮದಲ್ಲಿ ಮಂಜು ಪಾವಗಡ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಹೀಗೆ 45 ಲಕ್ಷ ಮತಗಳನ್ನು ಪಡೆಯುವುದರ ಮೂಲಕ 43 ಲಕ್ಷ ಮತಗಳನ್ನು ಪಡೆದಿದ್ದ ಅರವಿಂದ್ ಅವರನ್ನು ಮಣಿಸಿದ ಮಂಜು ಪಾವಗಡ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ವಿನ್ನರ್ ಟೈಟಲನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಗಿದ್ದ ಮಂಜು ಪಾವಗಡಗೆ 53 ಲಕ್ಷ ನಗದು ಬಹುಮಾನ ಸಿಕ್ಕಿದೆ.
ಇಷ್ಟು ವರ್ಷಗಳ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿಜೇತರಿಗೆ ಮಾತ್ರ ನಗದು ಬಹುಮಾನವನ್ನು ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಪ್ರವೇಶಿಸಿದ್ದ ಎಲ್ಲಾ 5 ಸ್ಪರ್ಧಿಗಳಿಗೂ ವಿವಿಧ ನಗದು ಬಹುಮಾನಗಳನ್ನು ಬಿಗ್ ಬಾಸ್ ನೀಡಿದ್ದಾರೆ. ಟೈಟಲ್ ಗೆದ್ದ ಮಂಜು ಪಾವಗಡಗೆ 53 ಲಕ್ಷ, ರನ್ನರ್ ಅಪ್ ಅರವಿಂದ್ ಕೆ ಪಿ ಗೆ 11 ಲಕ್ಷ, ದಿವ್ಯಾ ಉರುಡುಗಗೆ 6 ಲಕ್ಷ, ವೈಷ್ಣವಿಗೆ 3.5 ಲಕ್ಷ ಮತ್ತು ಪ್ರಶಾಂತ್ ಸಂಬರ್ಗಿಗೆ 2.5 ಲಕ್ಷ ರೂಪಾಯಿಯ ನಗದು ಬಹುಮಾನ ಲಭಿಸಿದೆ..