ಚುನಾವಣೆ ಮುಗಿದ ನಂತ್ರ ಮಂಡ್ಯ ಬಿಟ್ಟು ಸಿಂಗಪೂರ್ ಗೆ ತೆರಳುತ್ತಾರೆ ಎಂಬ ಗಾಸಿಬ್ ಗೆ ಉತ್ತರಿಸಿದ್ದ ಅಭಿ, ಮತದಾನದ ನಂತ್ರ, ಮಂಡ್ಯದಲ್ಲೇ ಇರುತ್ತೇನೆ. ಮಂಡ್ಯದ ಮಹಾವೀರ ಸರ್ಕಲ್ ನಲ್ಲಿ ಟೀ ಕುಡಿದು ತೋರಿಸ್ತೀನಿ ಎಂದು ಸವಾಲ್ ಹಾಕಿದ್ದರು. ಈ ಸವಾಲಿನಂತೇ ನಡೆದುಕೊಂಡಿದ್ದ ಅಭಿಗೆ, ಇದೀಗ ನಿಖೀಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯ ಬಿಟ್ಟು ಹೋಗ್ತಾರೆ ಅಂತ ಹೇಳಿದ್ದಕ್ಕೆ ಸವಾಲ್ ಹಾಕಿ, ಮಹಾವೀರ ಸರ್ಕಲ್ ಗೆ ತೆರಳಿ ಟೀ ಕುಡಿದು ತೋರಿಸಿದ್ದಾರೆ. ನಾನೂ ಚುನಾವಣೆ ಬಳಿಕ ಮಂಡ್ಯ ಬಿಟ್ಟು ಹೋಗ್ತಾರೆ ಎಂದು ನನ್ನ ವಿರೋಧಿಗಳು ಗಾಳಿ ಸುದ್ದಿ ಹಬ್ಬಿಸಿದ್ದಾರೆ.
ಆದರೇ ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ. ಚುನಾವಣೆ ಮುಗಿದ ನಂತರವೂ, ಮಂಡ್ಯದಲ್ಲೇ ಇರುತ್ತೇವೆ. ಇಲ್ಲೇ ಜಮೀನು ಖರೀದಿಸಿ, ಮನೆ ಕಟ್ಟಿಕೊಂಡು ವಾಸಮಾಡುತ್ತೇನೆ ಎಂದು ಹೇಳಿದ್ದಾರೆ.