ಸುಮಲತಾ ಏನೇ ಮಾಡಿದರೂ ಅವರ ಜತೆಗೆ ರಾಕ್ ಲೈನ್ ಅಣ್ಣನಂತೆ ಬೆಂಗಾವಲಾಗಿ ಇದ್ದೇ ಇರುತ್ತಾರೆ. ಚುನಾವಣೆ ಪ್ರಚಾರದಿಂದ ಹಿಡಿದು ಮತ ಎಣಿಕೆ ದಿನವೂ ರಾಕ್ ಲೈನ್ ವೆಂಕಟೇಶ್ ಜತೆಗೇ ಇದ್ದರು. ಈಗಲೂ ಸುಮಲತಾ ಕುಟುಂಬ ಸದಸ್ಯರಂತೇ ಇರುವ ರಾಕ್ ಲೈನ್ ಮಂಡ್ಯ ಜನರ ಪ್ರೀತಿಯ ಋಣ ತೀರಿಸಲು ಮಹತ್ವದ ನಿರ್ಧಾರವೊಂದನ್ನು ಮಾಡಿದ್ದಾರೆ.
ಈ ವಿಚಾರವನ್ನು ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನು ಮುಂದೆ ರಾಕ್ ಲೈನ್ ನಿರ್ಮಾಣ ಮಾಡುವ ಎಲ್ಲಾ ಸಿನಿಮಾಗಳ ಪೋಸ್ಟರ್, ಟೈಟಲ್ ಕಾರ್ಡ್ ಗಳಲ್ಲಿ ‘ಮಂಡ್ಯ ಜಿಲ್ಲೆಯ ಸ್ವಾಭಿಮಾನ ಮತ್ತು ಜನರ ಆಶೀರ್ವಾದ’ ಎಂದು ಹಾಕಿಸುತ್ತಾರಂತೆ. ಆ ಮೂಲಕ ಮಂಡ್ಯ ಜನರ ಪ್ರೀತಿಯ ಋಣ ತೀರಿಸಲು ಮುಂದಾಗುವುದಾಗಿ ರಾಕ್ ಲೈನ್ ಹೇಳಿಕೊಂಡಿದ್ದಾರೆ.