ಮತ್ತೆ ತೆಲುಗು ರಾಜ್ಯಗಳಲ್ಲಿ ರಾಬರ್ಟ್ ಕಡೆಗಣನೆ!

Date:

ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೂ ತೆಲುಗು ರಾಜ್ಯಗಳಿಗೂ ಯಾಕೋ ಆಗಿ ಬರುವಂತೆ ಕಾಣುತ್ತಿಲ್ಲ. ಈ ಹಿಂದೆ ಚಿತ್ರಮಂದಿರಗಳನ್ನು ಕೊಡುವುದಿಲ್ಲ ಎಂದು ತಡೆ ಒಡ್ಡಿದ್ದಾರೆ ಎಂದು ತೆಲುಗು ರಾಜ್ಯಗಳ ವಿರುದ್ಧ ಆರೋಪ ಮಾಡಿ ತದನಂತರ ಚಿತ್ರಮಂದಿರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ರಾಬರ್ಟ್ ಚಿತ್ರತಂಡಕ್ಕೆ ಇದೀಗ ಮತ್ತೆ ತಲೆನೋವು ಎದುರಾದಂತೆ ಕಾಣುತ್ತಿದೆ.

 

 

ತೆಲುಗಿನ ರಾಬರ್ಟ್ ರಿ ರಿಲೀಸ್ ಇವೆಂಟ್ ನಲ್ಲಿ ಈ ಚಿತ್ರ ಅತಿ ದೊಡ್ಡ ಮಟ್ಟದಲ್ಲಿ ತೆಲುಗು ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ ಹೈದರಾಬಾದ್ ಒಂದರಲ್ಲೇ ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳನ್ನು ನೀಡಲಿದ್ದೇವೆ ಎಂದು ಡಿಸ್ಟ್ರಿಬ್ಯೂಟರ್ ಗಳು ಹೇಳಿದ್ದರು. ಆದರೆ ಈಗ ಆಗುತ್ತಿರುವುದೇನು? ಇದೀಗ ತೆಲುಗು ರಾಬರ್ಟ್ ಚಿತ್ರದ ಪ್ರೀ ಬುಕಿಂಗ್ ಹೈದರಾಬಾದ್ ನಲ್ಲಿ ಆರಂಭವಾಗಿದ್ದು ಕೇವಲ ಹತ್ತು ಪ್ರದರ್ಶನಗಳನ್ನು ಮಾತ್ರ ಇದುವರೆಗೂ ಓಪನ್ ಮಾಡಲಾಗಿದೆ. ಇನ್ನೂ ವಿಶಾಖಪಟ್ಟಣಂನಲ್ಲಿ ಕೇವಲ 2ಚಿತ್ರಮಂದಿರಗಳಲ್ಲಿ ರಾಬರ್ಟ್ ಬುಕ್ಕಿಂಗ್ ಓಪನ್ ಆಗಿದೆ. ಕರ್ನೂಲ್ ನಲ್ಲಿ ರಾಬರ್ಟ್ ಚಿತ್ರದ ಬುಕ್ಕಿಂಗ್ ಓಪನ್ ಆಗಿಯೇ ಇಲ್ಲ..!

 

 

ತೆಲುಗು ಚಿತ್ರಗಳಿಗೆ ಒಳ್ಳೆಯ ಕಲೆಕ್ಷನ್ ಮಾಡಿಕೊಡುವ ನಿಜಾಮಾಬಾದ್ ನಲ್ಲಿಯೂ ಸಹ ರಾಬರ್ಟ್ ನ ಬುಕಿಂಗ್ ಇದುವರೆಗೂ ಓಪನ್ ಆಗಿಯೇ ಇಲ್ಲ. ತಿರುಪತಿಯಲ್ಲಿ ಸಹ ರಾಬರ್ಟ್ ಚಿತ್ರದ ಮುಂಗಡ ಬುಕ್ಕಿಂಗ್ ಓಪನ್ ಆಗಿಲ್ಲ. ಚಿತ್ತೂರ್ ನಲ್ಲಿ ರಾಬರ್ಟ್ ಮುಂಗಡ ಬುಕ್ಕಿಂಗ್ ಓಪನ್ ಆಗಿರುವುದು ಕೇವಲ ಒಂದೇ ಒಂದು ಚಿತ್ರಮಂದಿರದಲ್ಲಿ..! ಕಾಕಿನಾಡ ದಲ್ಲಿಯೂ ಸಹ ರಾಬರ್ಟ್ ಚಿತ್ರಕ್ಕೆ ಒಂದೇ ಒಂದು ಶೋ ಮುಂಗಡ ಬುಕಿಂಗ್ ಇಲ್ಲ.

 

 

 

ಹೀಗೆ ತೆಲುಗು ರಾಜ್ಯಗಳಲ್ಲಿ ಹಲವಾರು ಪ್ರಮುಖ ಪಟ್ಟಣ ಮತ್ತು ನಗರಗಳಲ್ಲಿ ರಾಬರ್ಟ್ ಚಿತ್ರದ ಮುಂಗಡ ಬುಕ್ಕಿಂಗ್ ಓಪನ್ ಆಗಿಲ್ಲ. ಚಿತ್ರ ಬಿಡುಗಡೆ ಗೆ ಇನ್ನು ಎರಡೇ ದಿನಗಳು ಬಾಕಿ ಇದ್ದು ಇನ್ನೂ ಸಹ ತೆಲುಗು ರಾಜ್ಯಗಳಲ್ಲಿ ರಾಬರ್ಟ್ ಚಿತ್ರದ ಬುಕ್ಕಿಂಗ್ ಓಪನ್ ಆಗಿಲ್ಲ.. ಪ್ರಸ್ತುತ ತೆಲುಗು ರಾಜ್ಯಗಳ ಎಲ್ಲಾ ಪಟ್ಟಣಗಳನ್ನು ಸೇರಿ ರಾಬರ್ಟ್ ಚಿತ್ರಕ್ಕೆ ಸಿಕ್ಕಿರುವ ಒಟ್ಟು ಶೋಗಳ ಸಂಖ್ಯೆ 30..!! ಇಂದು ಇಷ್ಟು ಚಿಕ್ಕ ಮಟ್ಟದಲ್ಲಿರುವ ರಾಬರ್ಟ್ ಚಿತ್ರದ ಶೋಗಳ ಸಂಖ್ಯೆ ನಾಳೆ ನಾಡಿದ್ದರಲ್ಲಿ ಹೆಚ್ಚಾಗುತ್ತಾ ಕಾದು ನೋಡಬೇಕು.. ಅಥವಾ ಹಳೆ ವೈಷಮ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ರಾಬರ್ಟ್ ಬೆನ್ನಿಗೆ ಚೂರಿ ಹಾಕುವ ಕೆಲಸವೇನಾದರೂ ನಡೆಯುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ..

 

 

 

 

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...