ಮಳೆಗಾಲದಲ್ಲಿ ಕೇವಲ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರ ತೊಂದರೆ ಆಗುವುದಿಲ್ಲ. ನಮ್ಮ ಸೂಕ್ಷ್ಮವಾದ ಚರ್ಮ ಕೂಡ ಹಲವು ಬಗೆಯ ಸೋಂಕುಗಳಿಗೆ ಗುರಿಯಾಗುತ್ತದೆ. ಈ ಸಮಯದಲ್ಲಿ ಬ್ಯಾಕ್ಟೀರಿಯ ಮತ್ತು ಫಂಗಲ್ ಸೋಂಕುಗಳು ತುಂಬಾ ಹೆಚ್ಚಾಗಿ ಕಾಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ನಮಗೆ ಎದುರಾಗುವ ಚರ್ಮವ್ಯಾಧಿಯ ಕೆಲವು ಸಮಸ್ಯೆಗಳಿಂದ ನಮ್ಮನ್ನು ನಾವು ಪಾರು ಮಾಡಿಕೊಳ್ಳಲು ಕೆಲವೊಂದು ಉಪಾಯಗಳನ್ನು ಅನುಸರಿಸಬೇಕು.
ಈ ಋತುವಿನಲ್ಲಿ ಚರ್ಮ ರೋಗಗಳು ಬರದಂತೆ ತಡೆಯಲು ಹಲವು ಕಾಳಜಿ ವಹಿಸಬೇಕಾಗುತ್ತದೆ. ತುರಿಕೆ ಸಂದರ್ಭದಲ್ಲಿ ಉಗುರುಗಳಿಂದ ಚರ್ಮವನ್ನು ಉಜ್ಜಬೇಡಿ . ಯಾವುದೇ ಔಷಧಿ ಅಥವಾ ಕ್ರೀಮ್ ಅನ್ನು ನೀವೇ ಅನ್ವಯಿಸಬೇಡಿ. ಯಾವುದೇ ಕ್ರೀಮ್, ಮನೆಮದ್ದು ಮಾಡುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ.
ಮಳೆಗಾಲದಲ್ಲಿ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯವಾದ ಸಾಬೂನಿನಿಂದ ಸ್ನಾನ ಮಾಡಬೇಕು ಎಂದು ಚರ್ಮರೋಗ ತಜ್ಞೆ ಡಾ.ಸರಿತಾ ಸಂಕೆ ಹೇಳುತ್ತಾರೆ. ಇದಲ್ಲದೇ ಈ ಋತುವಿನಲ್ಲಿ ಸಡಿಲವಾದ ಬಟ್ಟೆಗಳನ್ನು ಧರಿಸಬೇಕು. ಸೋಂಕನ್ನು ತಪ್ಪಿಸಲು, ಚರ್ಮದ ಜಲಸಂಚಯನವನ್ನು ಕಾಪಾಡಿಕೊಳ್ಳಲು ಆಂಟಿಫಂಗಲ್ ಪೌಡರ್ ಅಥವಾ ಕ್ರೀಮ್ ಹಚ್ಚಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
ಬೇವಿನ ಸೊಪ್ಪು ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುತ್ತದೆ. ಸಿಗದೇ ಇರುವವರು ಗ್ರಂಧಿಗೆ ಅಂಗಡಿಗಳಲ್ಲಿ ಬೇವಿನ ಸೊಪ್ಪಿನ ಪುಡಿಯನ್ನು ತೆಗೆದುಕೊಂಡು ಬಳಕೆ ಮಾಡಬಹುದು. ನೀವು ಸ್ನಾನ ಮಾಡುವ ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಉಗುರು ಬೆಚ್ಚಗಿನ ನೀರನ್ನು ಸ್ನಾನ ಮಾಡಲು ಬಳಕೆ ಮಾಡಬಹುದು. ಇಲ್ಲವೆಂದರೆ ಒಂದು ಟೇಬಲ್ ಚಮಚದಷ್ಟು ಬೇವಿನ ಪುಡಿಯನ್ನು ನಿಮ್ಮ ಒಂದು ಬಕೆಟ್ ಸ್ನಾನ ಮಾಡುವ ನೀರಿಗೆ ಮಿಶ್ರಣ ಮಾಡಿ ನಂತರ ಸ್ನಾನ ಮಾಡಬಹುದು. ಔಷಧಿ ಅಂಗಡಿಗಳಲ್ಲಿ ಸಿಗುವ ನೀಮ್ ಫೇಸ್ ವಾಷ್ ಮತ್ತು ಶವರ್ ಜಲ್ ಅನ್ನು ಸ್ನಾನ ಮಾಡುವ ನೀರಿನಲ್ಲಿ ಮಿಶ್ರಣ ಮಾಡಿ ನಿಮ್ಮ ಚರ್ಮವನ್ನು ಫಂಗಲ್ ಸೋಂಕಿನಿಂದ ಪ್ರತಿ ದಿನ ಬಳಕೆ ಮಾಡುವ ಮೂಲಕ ರಕ್ಷಣೆ ಮಾಡಿಕೊಳ್ಳಬಹುದು.
ಕೆಲವೊಮ್ಮೆ ಮಳೆಗಾಲದಲ್ಲಿ ಮೋಡ ಇರುವ ಸಂದರ್ಭದಲ್ಲಿ ನಮಗೆ ವಿಪರೀತ ಶೆಖೆ ಆಗುತ್ತದೆ. ಈ ಸಮಯದಲ್ಲಿ ಚರ್ಮದ ಮೇಲೆ ಅಲ್ಲಲ್ಲಿ ಬೆವರಿನ ಗುಳ್ಳೆಗಳು ಮೂಡಿ ಬರುತ್ತವೆ ಮತ್ತು ಚರ್ಮದ ಮೇಲೆ ಕೆರೆತ ಉಂಟಾಗುತ್ತದೆ. ಹಾಗಾಗಿ ತಂಪಾದ ನೀರಿನ ಸ್ನಾನ ಮಾಡಿ ಗಾಳಿಯಲ್ಲಿ ನಿಮ್ಮ ಚರ್ಮವನ್ನು ಒಣಗಲು ಬಿಡಬೇಕು. ಇನ್ನು ಚರ್ಮದ ಕೆರೆತಕ್ಕೆ ಕೆಲ ಮೈನ್ ಲೋಷನ್ ಹಚ್ಚಿ ಪರಿಹಾರ ಕಂಡುಕೊಳ್ಳಬೇಕು
ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಪರಿಹಾರ
Date: