ಪ್ರಪಂಚದಲ್ಲಿ ನಾನಾ ರೀತಿಯ ಕಾಯಿಲೆಗಳು ಇತ್ತೀಚಿಗೆ ಕಾಣಿಸುತ್ತಿವೆ. ಅದರಲ್ಲಿ ಇಲಿ ಜ್ವರ ಕೂಡ ಒಂದು. ಇಲಿ ತಾನೆ ಎಂದು ನಿರ್ಲಕ್ಷ ಮಾಡುವ ಹಾಗಿಲ್ಲ. ಏಕೆಂದರೆ ವೈದ್ಯರ ಪ್ರಕಾರ ಇದು ತುಂಬಾ ಡೇಂಜರ್. ಹೀಗಾಗಿ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು. ಯಾವುದಕ್ಕೂ ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ ಮತ್ತು ನೀವು ತಿನ್ನುವ ಆಹಾರ ಪದಾರ್ಥಗಳಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡಿಕೊಳ್ಳಿ..
ಇಲಿ ಜ್ವರದ ರೋಗಲಕ್ಷಣಗಳು
ತಲೆನೋವು
ವಾಕರಿಕೆ ಅಥವಾ ವಾಂತಿ ಸಂಭವ
ಮೈಕೈ ನೋವು
ಸೋಂಕು ಉಂಟಾದ ಎರಡು ದಿನಗಳಲ್ಲಿ ಮೈಮೇಲೆ ಗುಳ್ಳೆಗಳು
ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು
ಕೀಲುನೋವುಗಳು ಕಾಣಿಸುವುದು
ಇಲಿ ಕಚ್ಚಿದ ಜಾಗದಲ್ಲಿ ಗುಳ್ಳೆಗಳು ಕಾಣಿಸುವುದು
ಇಲಿ ಜ್ವರ ಹೇಗೆ ಹರಡುತ್ತದೆ ?
ಮಳೆಗಾಲದಲ್ಲಿ ವಿವಿಧ ರೀತಿಯ ರೋಗಗಳು ಬರಬಹುದು. ಅವುಗಳಲ್ಲಿ ಒಂದು ರೇಬೀಸ್. ಇಲಿ ಜ್ವರ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ನಿಂತ ನೀರು ಮತ್ತು ಚರಂಡಿಯ ಸಂಪರ್ಕಕ್ಕೆ ಬರುವ ಜನರು ರೇಬೀಸ್‌ಗೆ ತುತ್ತಾಗುತ್ತಾರೆ. ರೇಬೀಸ್ ಕಲುಷಿತ ಆಹಾರ ಮತ್ತು ಪಾನೀಯಗಳ ಮೂಲಕ ಹರಡುವ ಬ್ಯಾಕ್ಟೀರಿಯಾದ ಸೋಂಕು. ಕಸದ ಶೇಖರಣೆಯು ದಂಶಕಗಳ ಅಪಾಯವನ್ನು ಹೆಚ್ಚಿಸುತ್ತದೆ. ಇಲಿಗಳು ರಸ್ತೆಬದಿಯಲ್ಲಿ ಮತ್ತು ಗಟಾರದಲ್ಲಿ ಮಾತ್ರವಲ್ಲದೆ ಮನೆಯ ಅಡುಗೆ ಪ್ರದೇಶದಲ್ಲಿಯೂ ಕಾಣಿಸಿಕೊಳ್ಳುತ್ತವೆ. ಹೀಗೆ ಎಲ್ಲೆಲ್ಲೂ ಓಡಾಡುವ ಇಲಿಗಳ ಮೂತ್ರವೂ ನೀರಿಗೆ ಸೇರುತ್ತದೆ. ಆದರೆ ಈ ಬಗ್ಗೆ ಗಮನಹರಿಸದೆ ಹಲವರು ನೀರಿಗೆ ಇಳಿಯುತ್ತಿರುವುದು ಇಲಿ ಜ್ವರಕ್ಕೆ ಕಾರಣವಾಗಿದೆ.
ಇಲಿ ಜ್ವರ ಹೇಗೆ ತಡೆಗಟ್ಟಬೇಕು? ಅನ್ನೋದನ್ನ ನೋಡ್ತಾ ಹೋದ್ರೆ
ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ನೀವು ತಿನ್ನುವ ಆಹಾರ ಪದಾರ್ಥಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ
ಸಾಧ್ಯವಾದಷ್ಟು ನಿಮ್ಮ ಮನೆ ಅಥವಾ ಸುತ್ತಮುತ್ತ ಇಲಿಗಳು ಬರದಂತೆ ನೋಡಿಕೊಳ್ಳಿ.
ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ಮುಚ್ಚಿ ಇರಿಸಿ.
ಮನೆಯಲ್ಲಿ ಇಲಿಗಳ ಮಲ ಬಿದ್ದಿದ್ದರೆ ಅದನ್ನು ಮೊದಲು ಸ್ವಚ್ಛ ಮಾಡಿ ಬಳಿಕ ಅಲ್ಲಿ ಸೋಂಕು ವಿರೋಧಿ ದ್ರವ ಸಿಂಪಡಿಸಿ.
ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಆಹಾರ ಕೊಡುವ ವಿಚಾರದಲ್ಲಿ ಎಚ್ಚರ ಇರಲಿ. ಆದಷ್ಟು ಸ್ವಚ್ಛತೆ ಕಾಪಾಡಿ.
ಒಂದು ವೇಳೆ ನಿಮಗೆ ಇಲಿಗಳು ಪರಚಿದ ಹಾಗೂ ಕಚ್ಚಿದ ಗಾಯಗಳು ಕಂಡು ಬಂದರೆ ಮೊದಲು ಆ ಜಾಗವನ್ನು ಸೋಪು ಮತ್ತು ಬಿಸಿ ನೀರಿನಿಂದ ತೊಳೆಯಿರಿ. ಬಳಿಕ ತಕ್ಷಣವೇ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ.
ದೇಹದ ಯಾವುದೇ ಭಾಗದಲ್ಲಿ ಮೊದಲೇ ಗಾಯವಾಗಿದ್ದರೆ ಅದನ್ನು ಸಾಧ್ಯವಾದಷ್ಟು ಬ್ಯಾಂಡೇಜ್ ಮಾಡಿ ಇಡಿ. ಇಲಿಗಳು ಹೆಚ್ಚಾಗಿರುವ ಜಾಗದಿಂದ ಸಾಧ್ಯವಾದಷ್ಟು ದೂರವಿರಿ.
ಡೆಂಗ್ಯೂ ಮತ್ತು ಇಲಿ ಜ್ವರದ ರೋಗಲಕ್ಷಣಗಳು ಒಂದೇ ರೀತಿ ಇರುವುದರಿಂದ ಸರಿಯಾದ ರೋಗನಿರ್ಣಯ ಮಾಡುವುದು ಮುಖ್ಯವಾಗುತ್ತದೆ. ಹಾಗಾಗಿ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಡೆದುಕೊಳ್ಳಿ.