ಪುನೀತ್ ಅಭಿನಯದ ಯುವರತ್ನ ಚಿತ್ರ ಎಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ 4 ಹಾಡುಗಳು ಬಿಡುಗಡೆಯಾಗಿದ್ದು ಇತ್ತೀಚೆಗೆ ಬಿಡುಗಡೆಯಾದ ಪಾಠಶಾಲಾ ಹಾಡು ಸಖತ್ ಸದ್ದು ಮಾಡುತ್ತಿದೆ.
ಚಿತ್ರ ಬಿಡುಗಡೆಗೂ ಮುನ್ನವೇ ಮಾರ್ಚ್ 20 ರಂದು ಪುನೀತ್ ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗಲಿದೆ. ಹೌದು ಮಾರ್ಚ್ 20 ರಂದು ಮೈಸೂರಿನಲ್ಲಿ ಯುವರತ್ನ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇಟ್ಟುಕೊಳ್ಳಲಾಗಿದೆ. ಇದು ಪುನೀತ್ ಅಭಿಮಾನಿಗಳ ಪಾಲಿಗೆ ಮೊದಲ ಗಿಫ್ಟ್ ಆದರೆ ಅದೇ ದಿನದಂದು ಮತ್ತೊಂದು ಗಿಫ್ಟ್ ಅನ್ನು ಚಿತ್ರತಂಡ ನೀಡುತ್ತಿದೆ.
ಹೌದು ಅದೇ ದಿನದಂದು ಪ್ರೀರಿಲೀಸ್ ಇವೆಂಟ್ ನಲ್ಲಿ ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆ ಕೂಡ ನಡೆಯಲಿದೆ. ಪುನೀತ್ ಅಭಿಮಾನಿಗಳು ಬಹು ದಿನದಿಂದ ಕಾಯುತ್ತಿದ್ದ ಟ್ರೈಲರ್ ಅನ್ನು ಮಾರ್ಚ್ 20 ರಂದು ಯುವರತ್ನ ಚಿತ್ರತಂಡ ಬಿಡುಗಡೆ ಮಾಡುತ್ತಿದೆ.

ಹೀಗೆ ಪ್ರಿ ರಿಲೀಸ್ ಈವೆಂಟ್ ಜೊತೆಗೆ ಟೈಲರ್ ಬಿಡುಗಡೆ ಮಾಡುವ ಮೂಲಕ ಪುನೀತ್ ಅಭಿಮಾನಿಗಳಿಗೆ 2 ಗಿಫ್ಟ್ ಗಳನ್ನು ನೀಡಲು ಯುವರತ್ನ ಚಿತ್ರತಂಡ ಮುಂದಾಗಿದೆ..






