No menu items!
11.1 C
Munich
Wednesday, April 29, 2026

ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆ ಮಹಿಳೆಯಿಂದ ಹಲ್ಲೆ!

Must read

ಸಂಚಾರಿ ಎಎಸ್‌ಐ ಬಸವಯ್ಯ ಎಂಬುವವರ ಮೇಲೆ ಕಾರು ಚಾಲಕಿ ಅಪೂರ್ವಿ ಡಿಯಾಸ್‌ ಎಂಬಾಕೆ ಹಲ್ಲೆ ನಡೆಸಿದ್ದಾಳೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಮಹಿಳೆ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ಬಸವಯ್ಯ ಅವರು ದೂರು ನೀಡಿದ್ದಾರೆ.

ಬಸವಯ್ಯ ಅವರ ದೂರಿನ ಆಧಾರದ ಮೇಲೆ ಮಹಿಳೆ ವಿರುದ್ಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಉತ್ತರ ಪ್ರದೇಶ ಮೂಲದ ಮಹಿಳೆ ಅಪೂರ್ವಿ ಡಿಯಾಸ್‌ ಶನಿವಾರ ಮಧ್ಯಾಹ್ನ ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಸಿಗ್ನಲ್‌ ಜಂಪ್‌ ಮಾಡಿದ್ದಾರೆ. ಆಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಬಸವಯ್ಯ ಮಹಿಳೆಯನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಸಂಚಾರಿ ಕಾನೂ ಉಲ್ಲಂಘನೆ ಮಾಡಿದ್ದಲ್ಲದೇ, ಎಎಸ್ಐಗೆ ಅವಾಚ್ಯವಾಗಿ ನಿಂದಿಸಿದ್ದಾರೆ.

ಸಂಚಾರಿ ನಿಯಮ‌ ಉಲ್ಲಂಘನೆಗೆ ದಂಡ ಕಟ್ಟುವಂತೆ ಎಎಸ್‌ಐ ಕೇಳಿದ್ದರಿಂದ ಕೋಪಗೊಂಡ ಮಹಿಳೆ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಬಳಿಕ ಸಮವಸ್ತ್ರ ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದಿದ್ದಾರೆ. ಈ ಹಿನ್ನೆಲೆ ಬಸವಯ್ಯ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article