ಮಾ ಚುನಾವಣೆಯಲ್ಲಿ ಪ್ರಕಾಶ್ ರೈಗೆ ಆಯ್ತಾ ಮೋಸ?

1
35

ತೆಲುಗು ಚಿತ್ರರಂಗದ ಪ್ರತಿಷ್ಠಿತ ಕಲಾವಿದರ ಸಂಘ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ್ ರೈ ಸೋತು, ಎದುರಾಳಿ ಮಂಚು ವಿಷ್ಣು ಗೆದ್ದು ನಾಲ್ಕು ದಿನಗಳಾಗಿವೆ.

ಚುನಾವಣೆಯಲ್ಲಿ ಸೋತ ಬಳಿಕ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ರಾಜ್, ಮಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ‘ನಾನು ಅತಿಥಿಯಾಗಿ ಬಂದಿದ್ದೆ, ಅತಿಥಿಯಾಗಿಯೇ ಇರುವೆ” ಎಂದು ಭಾವುಕ ಹೇಳಿಕೆ ನೀಡಿದ್ದರು. ಆದರೆ ಈಗ ಮಾ ಚುನಾವಣೆಗೆ ಸಂಬಂಧಿಸಿದಂತೆ ಟ್ವಿಸ್ಟ್ ಎದುರಿಗೆ ಬಂದಿದೆ.

”ಮಾ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣುವಿನ ತಂದೆ ಮಾ ಸಂಘದ ಹಿರಿಯ ಸದಸ್ಯ ಮೋಹನ್‌ ಬಾಬು ಮತದಾನದ ದಿನ ಮಾ ಸದಸ್ಯರ ಮೇಲೆ, ಅಭ್ಯರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಚುನಾವಣಾ ಪೋಲಿಂಗ್ ಬೂತ್ ಪ್ರವೇಶಿಸಿದ್ದಾರೆ. ಅವರು ಮಾತ್ರವೇ ಅಲ್ಲದೆ ಮಾ ಸಂಘಕ್ಕೆ ಸಂಬಂಧಿಸದವರು ಪೋಲಿಂಗ್ ಬೂತ್ ಪ್ರವೇಶ ಮಾಡಿದ್ದಾರೆ,” ಎಂದು ಪ್ರಕಾಶ್ ರೈ ಆರೋಪಿಸಿದ್ದಾರೆ.

 

ಈ ಸಂಬಂಧ ಚುನಾವಣಾ ಅಧಿಕಾರಿಗೆ ಪತ್ರ ಬರೆದಿರುವ ಪ್ರಕಾಶ್ ರೈ, ”ಮತದಾನಕ್ಕೆ ಮುನ್ನ ಮೀಟಿಂಗ್ ನಡೆಸಿದ್ದ ನೀವು ಪೋಲಿಂಗ್ ಬೂತ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಹೇಳಿದ್ದಿರಿ. ಅದರಲ್ಲಿ ಎಲ್ಲವೂ ದಾಖಲಾಗಿರುವುದಾಗಿ ಹೇಳಿದ್ದಿರಿ. ಇದೀಗ ಪೋಲಿಂಗ್ ದಿನ ಮೋಹನ್‌ ಬಾಬು ಅವರಿಂದ ದಾಳಿ ಹಾಗೂ ನಿಂದನೆ ಆಗಿದ್ದನ್ನು ನಮ್ಮ ಪ್ಯಾನೆಲ್‌ನವರು ನೋಡಿದ್ದು, ಪೋಲಿಂಗ್ ನ್ಯಾಯುಯತವಾಗಿ ನಡೆದಿಲ್ಲವೆಂಬ ಅನುಮಾನ ನಮಗೆ ಬಂದಿದೆ” ಎಂದಿದ್ದಾರೆ.

”ನಿಯಮಗಳ ಪ್ರಕಾರ ಚುನಾವಣೆಯ ಸಿಸಿಟಿವಿ ದೃಶ್ಯಗಳನ್ನು ಕನಿಷ್ಠ ಮೂರು ತಿಂಗಳ ವರೆಗಾದರೂ ಕಾಯ್ದಿಡಬೇಕು, ಅಗತ್ಯವಿದ್ದಲ್ಲಿ ಅದನ್ನು ತನಿಖೆಗೆ ನೀಡಬೇಕು ಎಂದಿದೆ. ಇದನ್ನು ಸುಪ್ರೀಂಕೋರ್ಟ್ ಸಹ ಹೇಳಿದೆ. ತಾವು ಈ ಕೂಡಲೇ ಸಿಸಿಟಿವಿ ದೃಶ್ಯಗಳನ್ನು ನೀಡಬೇಕು. ಒಂದೊಮ್ಮೆ ನೀವು ಸಿಸಿಟಿವಿ ದೃಶ್ಯಗಳನ್ನು ಕೊಡಲು ತಡ ಮಾಡಿದರೆ. ಆ ದೃಶ್ಯಗಳನ್ನು ಡಿಲೀಟ್ ಮಾಡಿದ್ದೀರೆಂದೊ ಅಥವಾ ಸಿಸಿಟಿವಿ ದೃಶ್ಯಗಳನ್ನು ಟ್ಯಾಂಪರಿಂಗ್ ಮಾಡಿದ್ದಾರೆಂದೊ ನಂಬಬೇಕಾಗುತ್ತದೆ” ಎಂದಿದ್ದಾರೆ ಪ್ರಕಾಶ್ ರೈ.

1 COMMENT

LEAVE A REPLY

Please enter your comment!
Please enter your name here