ಬಂಡಾಯ ಶಾಸಕರು ರಾಜೀನಾಮೆ ಬಳಿಕ, ಮುಂಬೈನ್ ನ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಹೀಗೆ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರಲ್ಲಿ ಭೈರತಿ ಬಸವರಾಜ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿ, 15 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದಷ್ಟೇ ಅಲ್ಲದೇ.. ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿರು ಸಿದ್ದರಾಮಯ್ಯ, ಬೆಂಗಳೂರಿಗೆ ವಾಪಾಸ್ ಬರುವಂತೆ ಸಿದ್ದರಾಮಯ್ಯ ಕೋರಿದ್ದಾರಂತೆ. ಆದರೇ, ಶಾಸಕ ಭೈರತಿ ಬಸವರಾಜ್ ಸಿದ್ದರಾಮಯ್ಯ ಅವರ ಮಾತಿಗೆ ಶಾಸಕ ಭೈರತಿ ಬಸವರಾಜ್ ಸಮಯಾವಕಾಶ ಕೊಡುವಂತೆ ಕೋರಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೇ, ಬಿಜೆಪಿ ಶಾಸಕ ಅಶ್ವಥನಾರಾಯಣ್ ಮೇಲೆ ಗರಂ ಆಗಿರುವ ಶಾಸಕ ಭೈರತಿ ಬಸವರಾಜ್, ಅಶ್ವಥನಾರಾಯಣ್ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭೈರತಿ ಬಸವರಾಜ್ ಜೊತೆಗೆ, ಎಸ್ ಟಿ ಸೋಮಶೇಖರ್ ಕೂಡ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಅಲ್ಲದೇ ಯಾವುದೇ ಘಳಿಗೆಯಲ್ಲಿ ನಾವು ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಬಹುದು. ಹೀಗಾಗಿ ನಾವು ಸ್ವತಂತ್ರರು ಎಂದು ಶಾಸಕ ಅಶ್ವಥನಾರಾಯಣ ಅವರಿಗೆ ಭೈರತಿ ಬಸವರಾಜ್ ಹಾಗೂ ಎಸ್ ಟಿ ಸೋಮಶೇಖರ್ ಎಚ್ಚರಿಸಿದ್ದಾರೆ ಎನ್ನಲಾಗಿದೆ.