ಕೊರೋನಾವೈರಸ್ ಬಂದಾಗಿನಿಂದ ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಮನೆ ಮದ್ದುಗಳ ಹಾವಳಿ ಹೆಚ್ಚಾಗಿ ಬಿಟ್ಟಿದೆ. ನಿಜ ಹೇಳಬೇಕೆಂದರೆ ಮನೆಮದ್ದುಗಳಿಂದ ಕೊರೋನಾವೈರಸ್ ಯಾವುದೇ ಕಾರಣಕ್ಕೂ ಗುಣಮುಖ ಆಗುವುದೇ ಇಲ್ಲ. ಕೊರೋನಾವೈರಸ್ ಸೋಂಕು ತಗುಲಿದರೆ ಆ ವ್ಯಕ್ತಿ ಗುಣಮುಖ ಆಗಬೇಕು ಎಂದರೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲೇಬೇಕು, ಕೊರೋನಾವೈರಸ್ ಮಾತ್ರೆಗಳಿಂದ ಗುಣಮುಖವಾಗುವ ರೋಗವೇ ಹೊರತು ಮನೆಮದ್ದಿನಿಂದ ಗುಣಮುಖವಾಗುವಂತಹ ಚಿಕ್ಕ ರೋಗ ಅಲ್ಲ.
ದಯವಿಟ್ಟು ಅವರಿವರ ಮಾತನ್ನ ಕೇಳಿ ವಾಟ್ಸ್ ಆ್ಯಪ್, ಫೇಸ್ ಬುಕ್ ಗಳಲ್ಲಿ ಬರುವ ಫಾರ್ವರ್ಡ್ ಮೆಸೇಜ್ ಗಳನ್ನು ನೋಡಿ ಆ ಕ್ರಮಗಳನ್ನು ಅನುಸರಿಸಿ ಮನೆ ಮದ್ದನ್ನು ತೆಗೆದುಕೊಂಡು ನಿಮ್ಮ ಜೀವವನ್ನು ಬಲಿ ಕೊಡಬೇಡಿ. ಇತ್ತೀಚೆಗಷ್ಟೇ ಕೆಲದಿನಗಳಿಂದ ನಿಂಬೆಹಣ್ಣಿನ ರಸವನ್ನು ಮೂಗಿಗೆ ಬಿಟ್ಟುಕೊಂಡರೆ ಕೊರೋನಾವೈರಸ್ ಬರುವುದಿಲ್ಲ ಮತ್ತು ಕೊರೋನಾವೈರಸ್ ಬಂದಿದ್ದರೆ ಗುಣಮುಖರಾಗುತ್ತಾರೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು.
ಇದನ್ನು ಎಷ್ಟೋ ಜನ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಇದೇ ರೀತಿ ರಾಯಚೂರಿನ ಶಿಕ್ಷಕ ಬಸವರಾಜು ಎಂಬುವವರು ಈ ಮನೆಮದ್ದನ್ನು ಗಂಭೀರವಾಗಿ ತೆಗೆದುಕೊಂಡು ಮೂಗಿಗೆ ನಿಂಬೆರಸ ಕಾಪಿಟ್ಟುಕೊಂಡಿದ್ದಾರೆ. ಆದರೆ ಆ ಶಿಕ್ಷಕ ಮೃತಪಟ್ಟಿದ್ದಾರೆ. ಮೂಗಿಗೆ ನಿಂಬೆರಸ ಕಾಪಿಟ್ಟುಕೊಂಡ ಕೆಲವೇ ಗಂಟೆಗಳಲ್ಲಿ ಶಿಕ್ಷಕ ಮೃತಪಟ್ಟಿದ್ದಾರೆ. ಯಾರೋ ಏನೋ ಹೇಳ್ತಾರೆ ಅಂತ ಈ ರೀತಿ ಎಲ್ಲ ಮಾಡಿ ನಿಮ್ಮ ಪ್ರಾಣವನ್ನು ನೀವು ಕಳೆದುಕೊಳ್ಳಬೇಡಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೊಡ್ಡ ದೊಡ್ಡ ವಿಜ್ಞಾನಿಗಳೆಲ್ಲ ಸೇರಿ ವ್ಯಾಕ್ಸಿನ್ ಕಂಡುಹಿಡಿಯುತ್ತಿರಬೇಕಾದರೆ ಕೇವಲ ಒಂದು ನಿಂಬೆಹಣ್ಣಿನ ರಸ ಕೊರೋನಾವೈರಸ್ ಗುಣ ಮಾಡುತ್ತೆ ಎಂದರೆ ನಂಬ್ತೀರಾ? ಅದೆಲ್ಲ ಶುದ್ಧ ಸುಳ್ಳು.. ಯಾರಾದರೂ ಕೊರೋನಾವೈರಸ್ ಗುಣವಾಗುತ್ತೆ ಎಂದು ಮನೆಮದ್ದಿನ ಟಿಪ್ಸ್ ಗಳನ್ನು ಕಳುಹಿಸಿದರೆ ಒಂದೊಮ್ಮೆ ಅದನ್ನು ಪರಿಶೀಲಿಸಿ ಆಗ ನಿಮಗೆ ಅದರ ನಿಜಾಂಶ ಅರ್ಥವಾಗಿಬಿಡುತ್ತದೆ ಅದನ್ನು ಬಿಟ್ಟು ಪರಿಶೀಲಿಸದೆ ಅದನ್ನು ಅನುಸರಿಸಿ ಪ್ರಾಣವನ್ನು ಬಲಿ ಕೊಡಬೇಡಿ.