ಮೆಟ್ಟಿಲು ಏರುವುದರಲ್ಲಿ ಅಡಗಿದೆ ಅರೋಗ್ಯ ಗುಟ್ಟು!

Date:

ನಾವು ಎಷ್ಟು ವರ್ಷ ಬದುಕಿರುತ್ತೇವೆ ಎಂಬುದೇ ಎಲ್ಲರಿಗೂ ಇದರ ಬಗ್ಗೆ ಕುತೂಹಲವಿರುತ್ತೆ. ಆದರೆ, ಈವರೆಗೂ ಇದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ. ಭವಿಷ್ಯದ ಬಗ್ಗೆ ಯೋಚಿಸೋದು ನಿಲ್ಲಿಸಿ ಈಗ, ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವ ಸಮಯ ಬಂದಿದೆ.
ಹೌದು. ನೀವು ಎಷ್ಟು ಬೇಗನೇ ಮೆಟ್ಟಿಲು ಏರುತ್ತೀರಿ, ಇದರಲ್ಲೇ ನಿಮ್ಮ ರೋಗ್ಯದ ಗುಟ್ಟು ತಿಳಿಯುತ್ತೆ ಗೊತ್ತಾ. ಆಶ್ವರ್ಯ ಎನಿಸಿದರೂ ಇದು ಸತ್ಯ. ಉಸಿರು ಬಿಡದೇ ಒಂದೇ ಬಾರಿಗೆ ಮೆಟ್ಟಿಲು ಏರಿದರೇ ನಿಮ್ಮಲ್ಲಿ ಆರೋಗ್ಯದ ಸಮಸ್ಯೆ ಇಲ್ಲ ಎಂದು ಇತ್ತೀಚೆಗೆ ಅಧ್ಯಯನವೊಂದು ಬಹಿರಂಗಗೊಳಿಸಿದೆ. ಮೆಟ್ಟಿಲು ಏರುವಾಗ ಆಯಾಸವಾಗಿ ನಿಲ್ಲುವುದೂ, ಮಧ್ಯದಲ್ಲಿ ಧೀರ್ಘ ಉಸಿರು ತೆಗೆದುಕೊಳ್ಳುವುದು ಇದು ನಿಮ್ಮ ದೇಹದ ಹೃದಯರಕ್ತನಾಳ ಸೇರಿದಂತೆ ಇತರೆ ಭಾಗಗಳ ಅನಾರೋಗ್ಯವನ್ನೂ ಸೂಚಿಸುತ್ತವೆ. ಅಲ್ಲದೇ ದೇಹದಲ್ಲಿ ಅನಾರೋಗ್ಯ ಹಿನ್ನೆಲೆ ಸಾವಿನ ಮೂನ್ಸೂಚನೆಯನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಸ್ಪೇನ್ನ ಗಲಾಷಿಯದ ಕೊರುನಾ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿನ ತಂಡವೊಂದರ ಮೇಲೆ ಸಂಶೋಧನಾಕಾರರು ಅಧ್ಯಯನ ನಡೆಸಿದ್ರು. ಅದ್ರಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೆಟ್ಟಿಲುಗಳನ್ನು ವಿರಾಮ ತೆಗೆದುಕೊಳ್ಳದೇ, ಕೇವಲ ಒಂದೇ ನಿಮಿಷದಲ್ಲಿ ವಿರಾಮವಿಲ್ಲದೇ ಏರಬೇಕಾಗಿತ್ತು. ಈ ಅಧ್ಯಯನದಲ್ಲಿ 13,000 ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಸಾಕಷ್ಟು ಜನರು ಮೆಟ್ಟಿಲು ಹತ್ತಲು ಹೆಣಗಾಡುತ್ತಿರುವುದು ಕಂಡುಬಂತು. ಅಧ್ಯಯನದಲ್ಲಿ ಭಾಗಿಯಾದವರು ತಮ್ಮ ಟಾಸ್ಕ್ ಅನ್ನು ಪೂರ್ಣಗೊಳಿಸಲು ಹೆಣಗಾಡಿದವರು ಹೃದಯ ಸಮಸ್ಯೆಯಿಂದ ಸಾವನ್ನಪ್ಪುವ ಸಾಧ್ಯತೆಗಿಂತಲೂ ಮೂರು ಪಟ್ಟು ಬೇರೆ ಕಾಯಿಲೆಯಿಂದ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಅಷ್ಟೇ ಅಲ್ಲಾ ಸಂಶೋಧನಾಕಾರರು ನಡೆಸಿದ ಅಧ್ಯಯನದಲ್ಲಿ ಸೋತವರಿಗೆ ವೈದ್ಯರ ತಪಾಸಣೆಯನ್ನು ಮಾಡಿಸಿ ಎಂದು ಸೂಚಿಸಿದ್ರು. ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮವನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದ್ರು.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...