No menu items!
15.2 C
Munich
Wednesday, April 29, 2026

ಪ್ರಚಾರದ ವೇಳೆ ಡಿ ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು!? ಮುಂದೇನಾಯ್ತು ಗೊತ್ತಾ ?

Must read

ಕುಂದಗೋಳ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ ನಾಯಕ, ಸಚಿ​ವ ಡಿ.ಕೆ.ಶಿವಕುಮಾರ್‌  ಅಸ್ವಸ್ಥರಾಗಿ ಪ್ರಚಾ​ರ​ವನ್ನು ಅಲ್ಲಿಗೆ ನಿಲ್ಲಿಸಲಾಗಿದೆ.

ಡಿ.ಕೆ. ಶಿವಕುಮಾರ್‌ ಅವರು ಕುಂದಗೋಳದಲ್ಲಿ ಬಿಡುವಿಲ್ಲದ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದಲ್ಲಿ ಎದ್ದಿದ್ದ ಬಂಡಾಯ ಶಮನದ ಜೊತೆ ಕುಸುಮಾವತಿ ಶಿವಳ್ಳಿ ಗೆಲುವಿಗಾಗಿ ನಿರಂತರ ಓಡಾಟ ನಡೆಸಿದ್ದಾರೆ. ಈ ನಡುವೆ ಕುಂದಗೋಳದಲ್ಲಿ ಪಕ್ಷದ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಭೆ ನಡೆಸಿದ್ದಾರೆ.

ಇದರಿಂದಾಗಿ ಚುನಾವಣಾ ಒತ್ತಡದಿಂದ ಅಸ್ವಸ್ಥಗೊಂಡಿದ್ದಾರೆ. ಹುಬ್ಬಳ್ಳಿಯ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಡಿಕೆಶಿ, ಅಲ್ಲಿಯೇ ವೈದ್ಯರಿಂದ ಹೈ ಬಿಪಿ, ಶುಗ​ರ್‌ಗೆ ಚಿಕಿತ್ಸೆ ಪಡೆದಿದ್ದಾರೆ.ಕೊಠಡಿಯಿಂದ ಹೊರಬಂದಿಲ್ಲ. ವೈದ್ಯರ ಸಲಹೆ ಮೇರೆಗೆ ಪ್ರಮುಖರನ್ನು ಮಾತ್ರ ಕೊಠಡಿಯೊಳಗೆ ಕರೆಸಿಕೊಂಡು ಚರ್ಚೆ ನಡೆಸುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article