ಮೆಹಂದಿ ಹಚ್ಚಿಕೊಳ್ತೀರಾ!? ಮಹಿಳೆಯರೇ ಈ ಸುದ್ದಿ ಮಿಸ್ ಮಾಡ್ದೆ ನೋಡಲೇಬೇಕು!

Date:

ಮೆಹಂದಿ ಹಚ್ಚಿಕೊಳ್ತೀರಾ!? ಮಹಿಳೆಯರೇ ಈ ಸುದ್ದಿ ಮಿಸ್ ಮಾಡ್ದೆ ನೋಡಲೇಬೇಕು!

ಹಬ್ಬ ಹರಿದಿನಗಳಲ್ಲಿ, ಮದುವೆ, ಶುಭ ಸಂದರ್ಭಗಳಲ್ಲಿ ಮೆಹಂದಿ ಕೈ ಗೆ ಹಚ್ಚುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇನ್ನು ಪತಿ ಪತ್ನಿಯರಲ್ಲಿ ಗೋರಂಟಿಯ ಬಣ್ಣವು ಅವರಿಬ್ಬರ ನಡುವಿನ ಪ್ರೀತಿಯನ್ನು ತಿಳಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ ಅನೇಕ ಮಂದಿ ಇಂಟರ್ನೆಟ್ನಲ್ಲಿ ವಿವಿಧ ರೀತಿಯ ಡಿಸೈನ್ಗಳನ್ನು ಆಯ್ಕೆ ಮಾಡಿ ಮೆಹಂದಿಯಲ್ಲಿ ಹಾಕಿಸಿಕೊಳ್ಳುತ್ತಾರೆ.

ಆದ್ರೆ. ಇದೀಗ ಜಗವ ಸೆಳೆಯ ಸೌಂದರ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಮಹಿಳೆಯರ ನೆಚ್ಚಿನ ಮೆಹಂದಿಗೂ ಕಳಂಕ ಅಂಟಿದೆ. ಕೆಮಿಕಲ್.. ಕೆಮಿಕಲ್.. ಕೆಮಿಕಲ್.. ಯಾವ ವಸ್ತು ತೆಗೆದುಕೊಂಡ್ರೂ ಕೆಮಿಕಲ್. ಕೆಲ ವರ್ಷಗಳಿಂದ ಎಲ್ಲವೂ ಕೆಮಿಕಲ್ ಆಗಿಬಿಟ್ಟಿದೆ. ಈ ಮೊದಲು ಕಾಟನ್ ಕ್ಯಾಂಡಿಯಲ್ಲಿ ಕೆಮಿಕಲ್ ಪತ್ತೆಯಾಗಿ ಸದ್ಯ ಕಾಟನ್ ಕ್ಯಾಂಡಿ ಬ್ಯಾನ್ ಆಗಿದೆ.

ಗೋಬಿ ಮಂಚೂರಿಯಲ್ಲೂ ಅಪಾಯಕಾರಿ ರಾಸಾಯನಿಕ ಬಳಸಲಾಗ್ತಿದೆ. ಇದಷ್ಟೇ ಅಲ್ಲ.. ಕಲ್ಲಂಗಡಿ ಹಣ್ಣಿಗೂ ಇಂಜೆಕ್ಷನ್.. ಬಟಾಣಿಗೂ ಕಲರ್, ಲಿಪ್ಸ್ಟಿಕ್ನಲ್ಲೂ ಕೆಮಿಕಲ್ ಬಳಸಲಾಗ್ತಿದೆ. ಟ್ಯಾಟೂ ಹಾಕಿಸಿಕೊಂಡ್ರೆ ಅದರಲ್ಲಿ ಬಳಸುವ ಬಣ್ಣ ಮಾರಕ. ಮದರಂಗಿ, ಅಲಕ್ತಕ, ಗೋರಂಟಿ ಎಂದೆಲ್ಲಾ ಕರೆಯುವ ಮೆಹಂದಿ ಹೆಂಗಳೆಯರನ್ನು ಶೃಂಗಾರ ಹೆಚ್ಚಿಸುವ ಮತ್ತೊಂದು ಕಲೆಯಾಗಿದೆ. ಮದುವೆ, ನಿಶ್ಚಿತಾರ್ಥ, ನಾಮಕರಣ ಹಾಗೂ ಶುಭ ಸಮಾರಂಭಗಳಲ್ಲಿ ಹೆಣ್ಮಕ್ಕಳ ನೆಚ್ಚಿನ ಮೆಹಂದಿಗೂ ಕಳಂಕ ಅಂಟಿದೆ. ಮೆಹಂದಿಯಲ್ಲೂ ಅಪಾಯಕಾರಿ ಅಂಶ ಇರುವ ಬಗ್ಗೆ ಈಗಾಗಲೇ ಸಾವಿರಾರು ದೂರುಗಳು ಸಲ್ಲಿಕೆಯಾಗಿವೆ. ಕಳಪೆ ಮೆಹಂದಿ ಬಳಕೆಯಿಂದ ಅಲರ್ಜಿ, ತುರಿಕೆ, ಚರ್ಮ ಕ್ಯಾನ್ಸರ್, ಅಜೀರ್ಣ, ಫುಡ್ ಪಾಯಿಸನ್ ಆಗುವ ಸಾಧ್ಯತೆ ಇದೆ. ಹೀಗಾಗಿ ಮೆಹಂದಿ ಗುಣಮಟ್ಟ ಪರೀಕ್ಷೆ ರಾಜ್ಯದ ಆರೋಗ್ಯ ಇಲಾಖೆ ಮುಂದಾಗಿದೆ. ಈ ಮೂಲಕ ಮೆಹಂದಿಪ್ರಿಯರಿಗೂ ಶಾಕ್ ನೀಡಲು ಸಜ್ಜಾಗಿದೆ. ಕೇಂದ್ರದ ಅಧಿನಿಯಮಕ್ಕೆ ಒಳಪಡಿಸಲು ಆರೋಗ್ಯ ಇಲಾಖೆ ಪತ್ರ ಬರೆದಿದ್ದು ಈಗಾಗಲೇ ನಕಲಿ ಪ್ರಾಡೆಕ್ಟ್ಗಳನ್ನ ಪರೀಕ್ಷೆಗೆ ಒಳಪಡಿಸಿದೆ. ನಮ್ಮ ಧರ್ಮದಲ್ಲಿ ನ್ಯಾಚುರಲ್ ಮಹಂದಿಯನ್ನು ಅನಾದಿಕಾಲದಿಂದಲೂ ಬಳಸುತ್ತಾ ಬಂದಿದ್ದೇವೆ, ಕೆಮಿಕಲ್ ಮೆಹಂದಿಯನ್ನು ಮೊದಲು ಬ್ಯಾನ್ ಮಾಡಬೇಕು ಅಂತ ನಾರಿಯರು ಆಗ್ರಹಿಸಿದ್ದಾರೆ. ಒಟ್ಟಾರೆ, ನಾವು ಸಮಸ್ಯೆಗಳ ಸುಳಿಯಲ್ಲಿ ಬದುಕ್ತಿದ್ದೀವಾ? ನಾವು ಬದುಕ್ತಿರೋದೇ ದೊಡ್ಡ ಸಮಸ್ಯೆನಾ ಅನ್ನೋದು ಗೊತ್ತಾಗ್ತಿಲ್ಲ. ಅನಾದಿ ಕಾಲದಿಂದಲೂ ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಮೆಹಂದಿಯಲ್ಲಿ ಅಪಾಯಕಾರಿ ಅಂಶ ಬಳಕೆಯಾಗ್ತಿರೋದು ಮೆಹಂದಿ ಪ್ರಿಯರನ್ನು ಕಂಗಾಲಾಗಿಸಿರೋದಂತೂ ಸುಳ್ಳಲ್ಲ.

Share post:

Subscribe

spot_imgspot_img

Popular

More like this
Related

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ ತಿರುವನಂತಪುರ: ವೈವಿಧ್ಯತೆಯ...

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್ ದೇವನಹಳ್ಳಿ:...

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...