No menu items!
18.4 C
Munich
Friday, August 21, 2026

ನಿಯಮ ಉಲ್ಲಂಘನೆ: ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಗೆ ಶಿಕ್ಷೆ ಪ್ರಕಟಿಸಿದ BCCI!

Must read

ಚೆನ್ನೈ ವಿರುದ್ಧ IPL ಪಂದ್ಯದಲ್ಲಿ ಪಂಜಾಬ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ನಿಯಮ ಉಲ್ಲಂಘನೆ ಮಾಡಿದ್ದು, ಇದೀಗ BCCI ಅವರಿಗೆ ಶಿಕ್ಷೆ ವಿಧಿಸಿದೆ.

ನಿಯಮದ ಪ್ರಕಾರ ಪಂಜಾಬ್ ಆಲ್​ರೌಂಡರ್ ಗ್ಲೇನ್ ಮ್ಯಾಕ್ಸ್​ವೆಲ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಲೆವೆಲ್ 1ರಂತೆ ತಪ್ಪು ಮಾಡಿರುವುದು ಕಂಡುಬಂದಿದೆ. ಈ ತಪ್ಪಿನಿಂದಾಗಿ ಪಂದ್ಯದ ಶುಲ್ಕದಲ್ಲಿ ಶೇಕಡಾ 25ರಷ್ಟು ಮ್ಯಾಕ್ಸ್​ವೆಲ್​ಗೆ ದಂಡ ಹಾಕಲಾಗಿದೆ. ಇದರ ಜೊತೆ ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮ್ಯಾಕ್ಸ್‌ವೆಲ್​ಗೆ ದಂಡ ವಿಧಿಸಲಾಗಿದೆ.

ಐಪಿಎಲ್ ಪಂದ್ಯ ಆಡುವಾಗ ಯಾವುದೇ ಆಟಗಾರ ಅಸಭ್ಯ ವರ್ತನೆ, ಕ್ರಿಕೆಟ್ ಆಡುವ ವಸ್ತುಗಳನ್ನ ದುರುಪಯೋಗ ಮಾಡುವುದು, ಇತರೆ ಆಟಗಾರರನ್ನು ಹೀಯಾಳಿಸುವುದು, ಜಾಹೀರಾತು ಫಲಕಗಳನ್ನು ಒಡೆಯುವುದು, ಡ್ರೆಸ್ಸಿಂಗ್ ರೂಮ್​ನಲ್ಲಿ ಅಸಭ್ಯ ವರ್ತನೆ, ಗ್ಲಾಸ್ ಒಡೆಯುವುದು, ಔಟ್ ಆದರೆ ಬ್ಯಾಟ್​ನಿಂದ ಕೋಪ ತೀರಿಸಿಕೊಳ್ಳುವುದು ಇಂತಹ ವರ್ತನೆ ತೋರಿದರೆ ದಂಡ ವಿಧಿಸಲಾಗುತ್ತದೆ.

ಚೆನ್ನೈ ವಿರುದ್ಧ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದ್ದ ಗ್ಲೇನ್ ಮ್ಯಾಕ್ಸ್​ವೆಲ್​ ಕೇವಲ ಒಂದು ರನ್​​ಗೆ ಆರ್​ ಅಶ್ವಿನ್​ ಬೌಲಿಂಗ್​ನಲ್ಲಿ ಔಟ್ ಆಗಿದ್ದರು. ಇದೇ ಪಂದ್ಯದಲ್ಲಿ 2 ಓವರ್​ಗಳನ್ನು ಮಾಡಿ ಕೇವಲ 11 ರನ್ ನೀಡಿ ಒಂದು ವಿಕೆಟ್​ ಕೂಡ ಮ್ಯಾಕ್ಸಿ ಪಡೆದಿದ್ದರು. ಆದರೆ ಪಂದ್ಯದ ವೇಳೆ ಅವರು ಮಾಡಿರುವ ವರ್ತನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮ್ಯಾಕ್ಸ್​ವೆಲ್​ಗೆ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಿದೆ.

- Advertisement -spot_img

More articles

- Advertisement -spot_img

Latest article