ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!

1
722

ನಿಮಗೆ ಮೊಡವೆ ಸಮಸ್ಯೆ ತಲೆನೋವಾಗಿದೆಯೇ..?! ಯಾವ ಕ್ರೀಮ್ಗಳನ್ನು ಬಳಸಿದರೂ ಮೊಡವೆ ಗುಣವಾಗುತ್ತಿಲ್ಲವೇ…? ಮೊಡವೆ ನಿಮ್ಮ ಮುಖದ ಅಂದವನ್ನು ಹಾಳು ಮಾಡಿದೆ ಅಂತ ನಿಮಗೆ ಎಲ್ಲೂ ಸಭೆ ಸಮಾರಂಭಗಳಿಗೆ ಹೋಗಲಿಕ್ಕೆ ಮುಜುಗರವೇ..?! ತಲೆಕೆಡಿಸಿಕೊಳ್ಳಬೇಡಿ..! ಎಂಥೆಂಥಾ ಸಮಸ್ಯೆಗಳಿಗೇ ಪರಿಹಾರವಿದೆ.. ಹೀಗಿರುವಾಗ ಚಿಕ್ಕ ಮೊಡವೆ ಗುಳ್ಳೆಗಳಿಗೆ ಪರಿಹಾರ, ಔಷದ ಇಲ್ದೇ ಇರುತ್ತದೆಯೇ..?! ನೀವು ಸುಮ್ಮನೇ ಸಿಕ್ಕಾಪಟ್ಟೆ ದುಡ್ಡು ಕೊಟ್ಟು ಏನ್ ಏನೋ ಕ್ರೀಮ್ ಗಳನ್ನು ಮೆತ್ತಿಕೊಳ್ಳೋ ಅಗತ್ಯವಿಲ್ಲ..! ಮೊಡವೆಗೆ ಸಾಮಾನ್ಯವಾದ ಪರಿಹಾರ ಇದೆ..! ಹೀಗೆ ನಾನೆಲ್ಲೋ ಓದುತ್ತಿರುವಾಗ.. ಈ ಬಗ್ಗೆ ಮಾಹಿತಿ ಸಿಕ್ಕಿತು..! ಈ ಮಾಹಿತಿಯನ್ನು ನಿಮಗೆ ತಿಳಿಸಬೇಕು ಅನಿಸಿತು..! ತಿಳಿಸ್ತಾ ಇದ್ದೇನೆ..!

ಮೊಡವೆ ಸಮಸ್ಯೆಗೆ ಮನೆಮದ್ದುಗಳು..!

1. ಐಸ್ ಥೆರಪಿ :

P-14

ಐಸ್ ಮೊಡವೆಯ ಬಾವು ಮತ್ತ ಉರಿ ಊತವನ್ನು ಕಡಿಮೆ ಮಾಡುತ್ತಂತೆ..! ಮೊಡವೆ ಸಮಸ್ಯೆ ಇರೋ ಜಾಗದಲ್ಲಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತೆ..! ಚರ್ಮದ ಮೇಲಿನ ದೂಳು ಮತ್ತು ಎಣ್ಣೆಯ ಅಂಶಗಳನ್ನು ತೆಗೆಯುತ್ತದಂತೆ..! ಆದ್ದರಿಂದ ಮೊಡವೆ ನಿಯಂತ್ರಣಕ್ಕೆ ಕೆಲವೇ ಕೆಲವು ಸೆಕೆಂಡ್ಗಳ ಕಾಲ ಐಸ್ ಅನ್ನು ಮೊಡವೆ ಮೇಲೆ ಸ್ಪರ್ಶಿಸುತ್ತಿದ್ದರೆ ಒಳ್ಳೆಯದಂತೆ..!
2. ಬಿಳಿಯ ಟೂತ್ಪೇಸ್ಟ್:

P-23

ಐಸ್ ಚಿಕಿತ್ಸೆಯ ನಂತರ ಇದನ್ನು ಅನುಸರಿಸಿದರೆ ಒಳ್ಳೆಯ ಫಲಿತಾಂಶ ಸಿಗುತ್ತಂತೆ..! ಮೊಡವೆ ಇರೋ ಜಾಗಕ್ಕೆ ಟೂತ್ಪೇಸ್ಟ್ ಅನ್ನು ಹಚ್ಚಿ, ಒಂದು ಗಂಟೆ ಹಾಗೆಯೇ ಬಿಟ್ಟು, ನಂತರ ಕ್ಲೀನ್ ಮಾಡಿಕೊಳ್ಳಿ..! ನೆನಪಿರಲಿ, ಜೆಲ್ ಟೂತ್ ಪೇಸ್ಟ್ ಗಳನ್ನಲ್ಲ..! ವೈಟ್(ಬಿಳಿ) ಟೂತ್ ಪೇಸ್ಟ್ ಬಳಸಬೇಕಂತೆ..!

3. ಆವಿ ಅಥವಾ ಸ್ಟ್ರೀಮ್ ಚಿಕಿತ್ಸೆ:

P-32

ಮೊಡವೆ ಇರಲಿ ಇಲ್ಲದೇ ಇರಲಿ ತಿಂಗಳಿಗೆ ಕನಿಷ್ಟ ಒಮ್ಮೆಯಾದರೂ ನೀವು ಈ ಆವಿ ಚಿಕಿತ್ಸೆಯನ್ನು ಮಾಡಿಕೊಂಡರೆ ಒಳ್ಳೆಯದಂತೆ..! ಬಿಸಿನೀರಿನ ಆವಿ ಮುಖಕ್ಕೆ ಸ್ಪರ್ಶಿಸುವಂತೆ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಈ ಚಿಕಿತ್ಸೆ ನಂತರ ಮುಖ ತೊಳೆದುಕೊಳ್ಳಿ..! ಹೀಗೆ ಮಾಡೋದ್ರಿಂದ ಚರ್ಮದ ಉಸಿರಾಟಕ್ಕೆ ತುಂಬಾ ಒಳ್ಳೆಯದು..!

4. ಬೆಳ್ಳುಳ್ಳಿ ಮ್ಯಾಜಿಕ್ :

P-41

ಬೆಳ್ಳುಳ್ಳಿ ಮೊಡವೆ ನಿರೋಧಕವಂತೆ. ನಂಜನ್ನು ಇದು ಹೋಗಲಾಡಿಸುತ್ತಂತೆ. ಬೆಳ್ಳುಳ್ಳಿಯನ್ನು ಅರ್ಧ ಕತ್ತರಿಸಿ ಮುಖಕ್ಕೆ ತಿಕ್ಕಿಕೊಳ್ಳ ಬೇಕು..! 5-7 ನಿಮಿಷದ ನಂತರ ಮುಖ ತೊಳೆದು ಕೊಳ್ಳುವುದರಿಂದ ಮೊಡವೆ ಸಮಸ್ಯೆಗೆ ನಿಧಾನಕ್ಕೆ ಪರಿಹಾರ ಸಿಗುತ್ತಾ ಹೋಗುತ್ತಂತೆ..!

5. ಸೇಬು ರಸ :

P-5

ಸೇಬು ಯಾವಾಗಲೂ ಮನೆಯಲ್ಲಿ ಇರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಅದೇರೀತಿ ಖರ್ಚು ಕಡಿಮೆ ಅಂತಾನೂ ಹೇಳ್ತಾ ಇಲ್ಲ..! ಆದ್ರೂ ಸಾಧ್ಯವಾದರೆ ಸೇಬು ರಸವನ್ನು ಮೊಡವೆಗೆ ಹತ್ತಿಯಿಂದ ಹಚ್ಚಿಕೊಳ್ಳುವುದರಿಂದ ಬ್ಯಾಕ್ಟಿರಿಯಾವನ್ನು ಕೊಲ್ಲುತ್ತದೆ. ನಿಮ್ಮ ಮುಖವನ್ನು ತೊಳೆದ ನಂತರ 1 ಭಾಗ ಸೇಬು ರಸಕ್ಕೆ 3ರಷ್ಟು ನೀರನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕಂತೆ..!

6. ಮೊಟ್ಟೆಯ ಬಿಳಿಭಾಗ :

P-6

ಮೊಟ್ಟೆಯ ಬಿಳಿಭಾಗ ಪ್ರೋಟಿನ್ ಗಳಿಂದ ತುಂಬಿದ್ದು, ಮೊಡವೆ ವಿರುದ್ಧ ಹೋರಾಡುತ್ತದಂತೆ..! ಇದು ಮುಖದ ಮೇಲಿನ ಕಲೆಗಳನ್ನೂ ಹೋಗಲಾಡಿಸುತ್ತಂತೆ..!

7. ಟೊಮ್ಯಾಟೊ :

P-7

ಟ್ಯೊಮ್ಯಾಟೋ ಕತ್ತರಿಸಿ ಮುಖಕ್ಕೆ ತಿಕ್ಕಿಕೊಳ್ಳುವುದರಿಂದಲೂ ಮೊಡವೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆಯಂತೆ..!

8. ಕಿತ್ತಳೆ ಸಿಪ್ಪೆ :

P-8

ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದ ನಂತರ, ಕಿತ್ತಳೆ ಸಿಪ್ಪೆಯನ್ನು ಮುಖಕ್ಕೆ ಉಜ್ಜಿಕೊಂಡರೆ ಒಳ್ಳೆಯದಂತೆ..!

9. ಪಪ್ಪಾಯಿ :

P-9

ಬೆಚ್ಚಗಿನ ನೀರಲ್ಲಿ ಮುಖವನ್ನು ತೊಳೆದು ಚೆನ್ನಾಗಿ ಒರೆಸಿಕೊಂಡು, ಈ ಪಪ್ಪಾಯಿಯನ್ನು ಹಿಸುಕಿ ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ನಂತರ ಸ್ವಚ್ಛಮಾಡಿಕೊಂಡರೆ ಮೊಡವೆ ಕಡಿಮೆ ಆಗುತ್ತಂತೆ..!

10. ಬಾಳೆಹಣ್ಣಿನ ಸಿಪ್ಪೆ :

P-10

ನೀವು ಬಾಳೆಹಣ್ಣನ್ನು ತಿಂದಾಗ ಇನ್ಮುಂದೆ ಸಿಪ್ಪೆ ಎಸೆಯಬೇಡಿ..! ಅದು ನಿಮ್ಮ ಮೊಡವೆಗೆ ಔಷಧ..! ಆ ಸಿಪ್ಪೆಯನ್ನು ಮುಖಕ್ಕೆ ಚೆನ್ನಾಗಿ (ಮೊಡವೆ ಇರೋ ಜಾಗಕ್ಕೆ) ಉಜ್ಜಿಕೊಂಡರೆ ಒಳ್ಳೆಯದಂತೆ..!

11. ಆಲೂಗಡ್ಡೆ :

P-121

ಆಲೂಗಡ್ಡೆಯನ್ನು ತುರಿದು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷ ಬಿಟ್ಟು ತೊಳೆದರೆ ಮೊಡವೆ ಕಡಿಮೆ ಆಗುತ್ತಂತೆ..!

12. ದಾಸವಾಳ :

P-131

3-4 ದಾಸವಾಳದ ಹೂವನ್ನು 2ಅಥವಾ 3 ಲೋಟ ನೀರಿನಲ್ಲಿ ಕುದಿಸಿ ನಂತರ ಅದನ್ನು ತಣಿಸಿ, ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಹಚ್ಚಿಕೊಂಡರೆ ಮೊಡವೆ ನಿವಾರಣೆ ಸಾಧ್ಯವಿದೆಯಂತೆ..!

 

1 COMMENT

LEAVE A REPLY

Please enter your comment!
Please enter your name here