ಕಾಂಗ್ರೆಸ್ ಪಕ್ಷದ ಬೆಂಬಲದಿಂದ ರಾಜ್ಯದಲ್ಲಿ ಸ್ಥಿತ್ವದಲ್ಲಿರುವ ಮೈತ್ರಿ ಸರಕಾರ ಎಷ್ಟು ದಿನ ನಡೆಯುತ್ತದೋ ನಡೆಯಲಿ ಆದರೆ ಅದರ ಜತೆ ಜತೆಯಲ್ಲೇ ಪಕ್ಷದ ಸಂಘಟನೆ ಮಾಡೋಣ ಎಂಬ ತೀರ್ಮಾನಕ್ಕೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಬಂದಂತೆ ಕಾಣುತ್ತಿದೆ.
ಕಾಂಗ್ರೆಸ್ ನಾಯಕರು ಯಾವಾಗ ಬೇಕಾದರೂ ಕೈ ಕೊಡಬಹುದು ಇಂತಹ ಪರಿಸ್ಥಿಯಲ್ಲಿ ಮಧ್ಯಂತರ ಚುನಾವಣೆ ಬಂದರೆ ಆಗ ಪಕ್ಷ ಸಂಘಟನೆಗೆ ಮಾಡಲು ಸಾಧ್ಯವಶಗುವುದಿಲ್ಲ ಆದ್ದರಿಂದ ಈಗಿನಿಂದಲೇ ಪಾದಯಾತ್ರೆ, ಸಭೆ, ಸಮಾರಂಭಗಳ ಮೂಲಕ ಜನರ ಹತ್ತಿರ ಹೋದರೆ ಪಕ್ಷದ ಸಂಘಟನೆಯೂ ಆಗುತ್ತದೆ ಜೊತೆಗೆ ಚುನಾವಣೆ ನಡೆದರೆ ಲಾಭವೂ ಸಿಗುತ್ತದೆ ಎಂಬ ಲೆಕ್ಕಾಚಾರವನ್ನು ದೊಡ್ಡ ಗೌಡರು ಹಾಕಿಕೊಂಡಿದ್ದಾರೆ.
ಇದಕ್ಕೆ ಇಂದು ಮಾಸ್ಟರ್ ಪ್ಲಾನ್ ಮಾಡಿಕೊಂಡಿರುವ ದೇವೇಗೌಡರು ತಮ್ಮ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣರನ್ನು ಮುಂದಿಟ್ಟುಕೊಂಡು ಪಕ್ಷದ ಸಂಘಟನೆಗೆ ಇಳಿಯುವ ಚಿಂತನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೈತ್ರಿ ಸರಕಾರ ಹೆಚ್ಚು ದಿನ ಉಳಿಯಲ್ಲ ಎಂಬ ಅನುಮಾನ ದೇವೇಗೌಡರಿಗೆ ಬಂದಿರುವ ಕಾರಣ ಮಧ್ಯಂತರ ಚುನಾವಣೆ ಎದುರಾದರೆ ಪಕ್ಷ ಅನಿವಾರ್ಯವಾಗಿ ಸ್ಪರ್ಧೆ ಮಾಡಲೇ ಬೇಕಾಗುತ್ತದೆ ಆದ್ದರಿಂದ ಈಗಿನಿಂದಲೇ ಕಾರ್ಯಪ್ರವೃತ್ತರಾದರೆ ಪಕ್ಷಕ್ಕೆ ಲಾಭವಾಗುತ್ತದೆ ಎಂಬ ಚಿಂತನೆ ದೇವೇಗೌಡರದ್ದಾಗಿದೆ.